alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲೂ ಸಿಗಲಿದೆ ವೈಫೈ ಸೌಲಭ್ಯ

flight wifi 1ಇನ್ನು 10 ದಿನಗಳಲ್ಲಿ ಭಾರತದ ವಿಮಾನ ಪ್ರಯಾಣಿಕರಿಗೆಲ್ಲ ಗುಡ್ ನ್ಯೂಸ್ ಕಾದಿದೆ. ವಿಮಾನ ಪ್ರಯಾಣದ ವೇಳೆ ವೈಫೈ ಸೌಲಭ್ಯ, ಹಾಗೂ ಮೊಬೈಲ್ ಕರೆ ಮಾಡಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಈ ಬಗ್ಗೆ ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್.ಎನ್. ಚೌಬೆ ಸುಳಿವು ಕೊಟ್ಟಿದ್ದಾರೆ. ಆನ್ ಬೋರ್ಡ್ ನಲ್ಲಿ ಫೇಸ್ ಬುಕ್, ಟ್ವಿಟ್ಟರ್ ಅಥವಾ ಇಂಟರ್ನೆಟ್ ಬ್ರೌಸಿಂಗ್ ಗೆ ಅವಕಾಶವಿರಲಿಲ್ಲ. ಭಾರತೀಯ ಬಾಹ್ಯಾಕಾಶದಲ್ಲಿ ಇಂಟರ್ನೆಟ್ ಬಳಕೆಗೆ ಇನ್ನು 10 ದಿನದಲ್ಲಿ ಅನುಮತಿ ಸಿಗಲಿದೆ ಅಂತಾ ಚೌಬೆ ಭರವಸೆ ನೀಡಿದ್ದಾರೆ.

ಇಷ್ಟು ದಿನ ವಿಮಾನ ಹಾರಾಟದ ವೇಳೆ ಪ್ರಯಾಣಿಕರು ಮೊಬೈಲ್ ಬಳಸುವಂತಿರಲಿಲ್ಲ. ಆದ್ರೆ ಇನ್ಮೇಲೆ ಫೋನ್ ಕಾಲ್ ಮಾಡಲು ಕೂಡ ಅವಕಾಶ ನೀಡುವ ಸಾಧ್ಯತೆ ಇದೆ. ಭಾರತದ ವೈಫೈ ಸಂಪರ್ಕಗಳೆಲ್ಲ ಸ್ಥಳೀಯವಾದುದರಿಂದ ವಿಮಾನದಲ್ಲಿ ಇಂಟರ್ನೆಟ್ ಸೌಲಭ್ಯ ಕಲ್ಪಿಸುವುದು ದುಬಾರಿಯಾಗುತ್ತಿತ್ತು. ಇದೇ ಕಾರಣಕ್ಕೆ ಇದುವರೆಗೂ ಪ್ರಯಾಣಿಕರಿಗೆ ಇಂಟರ್ನೆಟ್ ಬಳಕೆಗೆ ಅವಕಾಶವಿರಲಿಲ್ಲ. ಕೊನೆಗೂ ಭಾರತದ ವಿಮಾನ ಪ್ರಯಾಣಿಕರಿಗೆ ಅಚ್ಛೇ ದಿನ್ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...