alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಕ್ಕೆ ಕಾರಣವಾಗಿದೆ ಈ ಟೀ ಶರ್ಟ್

ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಯೊಬ್ಬನನ್ನು ಸೇನೆಯ ಜೀಪ್ ಗೆ ಕಟ್ಟಿಹಾಕಿ ಮೆರವಣಿಗೆ ಮಾಡಲಾಗಿತ್ತು. ಈಗ ಅದೇ ರೀತಿಯ ಚಿತ್ರವಿರುವ ಟಿ-ಶರ್ಟ್ ಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕಿಡಲಾಗಿದೆ.

ಇದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಮುಖಂಡ ತಜಿಂದರ್ ಬಗ್ಗಾ ಅವರಿಗೆ ಸೇರಿದ ಆನ್ ಲೈನ್ ಮಳಿಗೆಯಲ್ಲಿ ಈ ಟಿ-ಶರ್ಟ್ ಮಾರಲಾಗುತ್ತಿದೆಯಂತೆ. ಈ ಟಿ ಶರ್ಟ್ ಕಲ್ಲು ತೂರಾಟ ನಡೆಸುವವರಿಗೆ ಎಚ್ಚರಿಕೆ ನೀಡುತ್ತಿದೆ, ಮೇಜರ್ ಗೊಗೊಯ್ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದೆ.

ಯಾರು ಇದನ್ನು ವಿರೋಧಿಸುತ್ತಿದ್ದಾರೋ ಅವರು ಭಾರತದ ವಿರುದ್ಧವೇ ಪ್ರತಿಭಟಿಸಿದಂತೆ. ಕಲ್ಲು ತೂರಾಟ ಮಾಡುವಾಗ ನಾಚಿಕೆ ಇಲ್ಲದವರಿಗೆ ಈ ಟಿ ಶರ್ಟ್ ತೊಡಲು ನಾಚಿಕೆ ಏಕೆ ಅಂತಾ ತಜಿಂದರ್ ಬಗ್ಗಾ ಟ್ವೀಟ್ ಮಾಡಿದ್ದಾರೆ.

ಆದ್ರೆ ಈ ವಿನ್ಯಾಸ ಸರಿಯಿಲ್ಲ, ಬಿಜೆಪಿ ಮುಖಂಡ ಕ್ಷಮೆ ಯಾಚಿಸಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ. ಇದು ಪ್ರಚೋದನಕಾರಿ ಸಂದೇಶವನ್ನು ಹೊಂದಿದೆ ಅಂತಾ ಆರೋಪ ಮಾಡುತ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...