alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಬೆಂಗಳೂರಿಗರು

ಭಾರತೀಯರಾದ ನಾವು ಕ್ಯಾಬ್ ನಲ್ಲಿ ಪ್ರಯಾಣ ಮಾಡುವ ವೇಳೆ ಫೋನ್ ಒಂದೇ ಅಲ್ಲ ಮಕ್ಕಳ ಟ್ರೈಸಿಕಲ್, ಎಲ್ ಸಿ ಡಿ ಟಿವಿ, ಬ್ಯಾಗ್, ಸಿಗಡಿ ಮೀನನ್ನು ಕೂಡ ಮರೆತು ಹೋಗ್ತೇವೆ. ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಹೊಸ ಸಮೀಕ್ಷೆಯಲ್ಲಿ ಇದ್ರ ಬಗ್ಗೆ ಉಲ್ಲೇಖ ಮಾಡಿದೆ.

ಕಂಪನಿ ಸಮೀಕ್ಷಾ ವರದಿ ಪ್ರಕಾರ, ಕಾರಿನಲ್ಲಿ ವಸ್ತುಗಳನ್ನು ಮರೆಯುವ ಹಾಗೂ ಬಿಡುವ ವಿಚಾರದಲ್ಲಿ ಇಡೀ ಏಷ್ಯಾದಲ್ಲಿಯೇ ಭಾರತೀಯರು ಮೊದಲ ಸ್ಥಾನದಲ್ಲಿದ್ದಾರಂತೆ. ಬೆಂಗಳೂರು ಹಾಗೂ ದೆಹಲಿ ಎನ್ ಸಿ ಆರ್ ಜನರು ಅತಿ ಹೆಚ್ಚು ವಸ್ತುಗಳನ್ನು ಕಾರಿನಲ್ಲಿ ಬಿಡ್ತಾರಂತೆ.

ಸಿಂಗಾಪುರ್, ಮನಿಲಾ ಮತ್ತು ಮೆಲ್ಬರ್ನ್ ಜನರಿಗಿಂತ ಈ ವಿಚಾರದಲ್ಲಿ ಭಾರತೀಯರು ಮುಂದಿದ್ದಾರಂತೆ. ಏಷ್ಯಾದ ಅಗ್ರ 10 ನಗರಗಳ ಪಟ್ಟಿಯಲ್ಲಿ ಹೈದ್ರಾಬಾದ್ ಮತ್ತು ಮುಂಬೈ ಕೂಡ ಸ್ಥಾನ ಪಡೆದಿದೆ. ಸೋಮವಾರ ಮತ್ತು ಶುಕ್ರವಾರ ವಸ್ತುಗಳನ್ನು ಮರೆಯುವವರ ಸಂಖ್ಯೆ ಹೆಚ್ಚಿರುತ್ತದೆಯಂತೆ. ಬೆಳಗಿನ ಜಾವ 5 ಗಂಟೆಯಿಂದ 6 ಗಂಟೆಯವರೆಗೆ ಹಾಗೂ ಮಧ್ಯಾಹ್ನ 1 ಗಂಟೆಯಿಂದ ನಾಲ್ಕು ಗಂಟೆಯವರೆಗೆ ಹೆಚ್ಚಿರುತ್ತದೆಯಂತೆ.

ಏಷ್ಯಾ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂದಿದ್ದರೆ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...