alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಶೇ.73 ರಷ್ಟು ಸಂಪತ್ತು ಯಾರ ಬಳಿಯಿದೆ ಗೊತ್ತಾ…?

ಭಾರತದಲ್ಲಿ ಆದಾಯ ಅಸಮಾನತೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಹೊಸದಾಗಿ ನಡೆಸಿರುವ ಸಮೀಕ್ಷೆ. ಈ ಸಮೀಕ್ಷೆಯ ಪ್ರಕಾರ ಕಳೆದ ವರ್ಷ ಭಾರತದಲ್ಲಿ ಸಂಗ್ರಹವಾಗಿರುವ ಒಟ್ಟಾರೆ ಆದಾಯದಲ್ಲಿ ಶೇ.73ರನ್ನು ಭಾರತದಲ್ಲಿರೋ ಶೇ.1ರಷ್ಟು ಶ್ರೀಮಂತರೇ ಹೊಂದಿದ್ದಾರೆ.

ಭಾರತದಲ್ಲಿರುವ ಬಡವರಲ್ಲಿ ಶೇ.67ರಷ್ಟು ಜನರ ಆಸ್ತಿಯಲ್ಲಿ ಶೇ.1ರಷ್ಟು ಮಾತ್ರ ಹೆಚ್ಚಳವಾಗಿದೆ. ಜಾಗತಿಕ ಮಟ್ಟದಲ್ಲೂ ಇದೇ ರೀತಿಯ ಅಸಮಾನತೆ ಇದೆ. ಕಳೆದ ವರ್ಷ ಸಂಗ್ರಹವಾಗಿರೋ ಒಟ್ಟು ಆದಾಯದಲ್ಲಿ ಶೇ.82ರಷ್ಟು, ಶೇ.1 ರಷ್ಟು ಶ್ರೀಮಂತರಿಗೆ ಸೇರಿದ್ದಾಗಿದೆ. 3.7 ಬಿಲಿಯನ್ ಬಡ ಜನರ ಆಸ್ತಿಯಲ್ಲಿ ಹೆಚ್ಚಳವೇ ಆಗಿಲ್ಲ.

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆ ಹಿನ್ನೆಲೆಯಲ್ಲಿ Oxfam  ಈ ಸಮೀಕ್ಷೆ ನಡೆಸಿದೆ. ಈ ಸಭೆಯಲ್ಲಿ ಜಾಗತಿಕ ಆದಾಯ ಅಸಮಾನತೆ ಬಗ್ಗೆ ವಿಶ್ವ ನಾಯಕರು ಚರ್ಚೆ ನಡೆಸಲಿದ್ದಾರೆ. ಭಾರತದಲ್ಲಿರೋ ಶೇ.1ರಷ್ಟು ಶ್ರೀಮಂತರು ದೇಶದ ಒಟ್ಟಾರೆ ಆಸ್ತಿಯ ಶೇ.58ರಷ್ಟನ್ನು ಹೊಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ ಶೇ.50ರಷ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...