alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಸ್ಟ್ ಪೇಮೆಂಟ್ ಬ್ಯಾಂಕ್ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅನ್ನು ಕಳೆದ ಶನಿವಾರ ಉದ್ಘಾಟಿಸಿರುವುದು ನಿಮಗೆ ಗೊತ್ತೇ ಇದೆ. ಈ ಬ್ಯಾಂಕ್ ಯಾವ ರೀತಿ ಕಾರ್ಯ ನಿರ್ವಹಿಸುತ್ತೆ ಎಂಬುದರ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಎಟಿಎಂ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬದಲಾಗಿ QR ಕಾರ್ಡನ್ನು ವಿತರಿಸಲಿದ್ದು, ಇದು ಬಯೋಮೆಟ್ರಿಕ್ ದೃಢೀಕರಣದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಇದನ್ನು ಉಪಯೋಗಿಸಲು ಪಿನ್ ನಂಬರ್ ಬೇಕಾಗಿಲ್ಲ.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸದ್ಯಕ್ಕೆ ಮೂರು ವಿಧದ ಅಕೌಂಟನ್ನು ಓಪನ್ ಮಾಡಲು ಅವಕಾಶ ನೀಡಿದ್ದು, ಜೊತೆಗೆ ನಿಮ್ಮ ಹಣಕ್ಕೆ ಶೇ. 4 ಬಡ್ಡಿಯನ್ನು ನೀಡಲಿದೆ. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೊಬೈಲ್ ಆಪ್ ಲಭ್ಯವಿದ್ದು, ನೀವು ಪೋಸ್ಟ್ ಆಫೀಸಿಗೆ ಹೋಗುವ ಅವಶ್ಯಕತೆ ಇಲ್ಲ.

ನೀವು ನಿಮ್ಮ ಅಕೌಂಟಿನಿಂದ ಹಣ ತೆಗೆಯಬೇಕೆಂದಾಗ ಮೊಬೈಲ್ ಆಪ್ ಮೂಲಕ ವಿನಂತಿಸಿಕೊಂಡರೆ ಪೋಸ್ಟ್ ಮ್ಯಾನ್ ನಿಮ್ಮ ಮನೆ ಬಾಗಿಲಿಗೆ ಹಣವನ್ನು ತಲುಪಿಸುತ್ತಾರೆ. ಈ ಕಾರ್ಯಕ್ಕಾಗಿ ಪೋಸ್ಟ್ ಮ್ಯಾನ್ 25 ರೂ. ಗಳನ್ನು ಸೇವಾ ಶುಲ್ಕವಾಗಿ ತೆಗೆದುಕೊಳ್ಳುತ್ತಾರೆ. ನೀವು QR ಕಾರ್ಡನ್ನು ಇತರರಿಗೆ ಹಣವನ್ನು ಕಳಿಸಲು ಹಾಗೂ ಆನ್ಲೈನ್ ಬಿಲ್ ಪಾವತಿಸಲು ಬಳಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...