alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಮೊದಲ ‘ಕ್ಲೀನ್ ಸ್ಟ್ರೀಟ್ ಫುಡ್ ಹಬ್’ ಯಾವುದು ಗೊತ್ತಾ…?

ಎಂತಹಾ ಫೈವ್ ಸ್ಟಾರ್ ಹೊಟೇಲ್ ಗಳಿದ್ದರೂ ಬೀದಿ ಬದಿ ನಿಂತು ತಿಂಡಿ ಮೆಲ್ಲುವ ಸುಖವೇ ಬೇರೆ. ಆಹಾ ಬಲ್ಲವನೇ ಬಲ್ಲ ಸ್ಟ್ರೀಟ್ ಫುಡ್ ರುಚಿಯಾ…… ಹೀಗೆ ರುಚಿ ರುಚಿಯಾದದ್ದನ್ನು ತಿನ್ನಲು ಇಷ್ಟಪಡುವವರೆಲ್ಲರನ್ನೂ ಕಾಡುವ ಒಂದೇ ಪ್ರಶ್ನೆಯೆಂದರೆ, ತಿನ್ನುವ ತಿಂಡಿ, ತಯಾರಿಸುವ ಜಾಗ ಶುಚಿಯಾಗಿದೆಯಾ ಎಂಬುದು.

ಹೆಚ್ಚಿನ ಸಂದರ್ಭಗಳಲ್ಲಿ ‘ಇಲ್ಲ’ ಅನ್ನುವುದೇ ಉತ್ತರವಾಗಿರುತ್ತದೆ. ಇಂತಹ ಫುಡ್ ಸ್ಚ್ರೀಟ್ ಗಳ ಬಗ್ಗೆ ಅಧ್ಯಯನ ನಡೆಸಿದ ಭಾರತದ ಆಹಾರ ಭದ್ರತಾ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಹ್ಮದಾಬಾದ್ ನ ಕಂಕಾರಿಯಾ ಸರೋವರದ ಸುತ್ತ ಇರುವ ಫುಡ್ ಸ್ಟ್ರೀಟ್ ಅನ್ನು ದೇಶದ ಅತ್ಯಂತ ಶುಚಿಯಾದ ಫುಡ್ ಹಬ್ ಎಂದು ಘೋಷಿಸಿದೆ.

ಸುಮಾರು 16ನೆಯ ಶತಮಾನದಷ್ಟು ಹಳೆಯದಾದ ಈ ಸರೋವರದ ಸುತ್ತಮುತ್ತ ಸುಮಾರು 66 ಕ್ಕೂ ಅಧಿಕ ಬೀದಿ ತಿಂಡಿ ವ್ಯಾಪಾರಿಗಳಿದ್ದಾರೆ. ಇಡೀ ವರ್ಷದಲ್ಲಿ ಸುಮಾರು 1.2 ಕೋಟಿ ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿರುವ ಅಂಶವಾಗಿದೆ.

ಈ ಪ್ರದೇಶವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದರೊಂದಿಗೆ ದೇಶಾದ್ಯಂತ ಇಂತಹ ಸುಮಾರು 150 ಕ್ಕೂ ಅಧಿಕ ಸ್ಟ್ರೀಟ್ ಫುಡ್ ಹಬ್ ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರಾಧಿಕಾರ ಹೇಳಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...