alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ಬಳಕೆದಾರರೇ ಎಚ್ಚರ…! ಬಹಿರಂಗವಾಗಿದೆ ಈ ‘ಸತ್ಯ’

ಆನ್‍ಲೈನ್‍ನಲ್ಲೇ ಎಲ್ಲ ವ್ಯವಹಾರ ಮಾಡುವವರು, ಎಲ್ಲದಕ್ಕೂ ಆನ್‍ಲೈನನ್ನೇ ನೆಚ್ಚಿಕೊಂಡಿರುವವರು ಮುಂದೆ ಇನ್ನೂ ಹೆಚ್ಚು ಜಾಗರೂಕರಾಗಿರಬೇಕಾದ ಅಗತ್ಯವಿದೆ.

ಏಕೆಂದರೆ ಫಿಷಿಂಗ್ ಆಟ್ಯಾಕ್‍ಗೆ ತುತ್ತಾಗುತ್ತಿರುವ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಡೆಲ್ ಟೆಕ್ನಾಲಜೀಸ್‍ನ ಆರ್ ಎಸ್‍ ಎ ಸೆಕ್ಯುರಿಟಿಯ ಅಧ್ಯಯನ ಈ ಅಂಶ ಹೊರಗೆಡಹಿದೆ. ಮೊದಲ ಮೂರು ಸ್ಥಾನದಲ್ಲಿ ಕ್ರಮವಾಗಿ ಕೆನಡಾ, ಅಮೆರಿಕಾ ಮತ್ತು ನೆದರ್‍ಲ್ಯಾಂಡ್‍ಗಳಿವೆ.

ಆನ್‍ ಲೈನ್ ಬಳಕೆದಾರರ ಯೂಸರ್ ನೇಮ್, ಪಾಸ್‍ ವರ್ಡ್, ಕ್ರೆಡಿಟ್ ಕಾರ್ಡ್ ಡಿಟೇಲ್ಸ್ ಇತ್ಯಾದಿಗಳನ್ನು ತಂತ್ರಜ್ಞಾನದ ದುರ್ಬಳಕೆ ಮೂಲಕ ಪಡೆಯುವ ಕಾನೂನುಬಾಹಿರ ಕ್ರಮವೇ ಫಿಷಿಂಗ್. ಇನ್ನು ಫಿಷಿಂಗ್ ಮಾಡುವ ಕ್ರಿಮಿನಲ್‍ ಗಳು ಆಶ್ರಯ ಪಡೆದಿರುವ ದೇಶಗಳ ಪೈಕಿ ಭಾರತಕ್ಕೆ 2ನೇ ಸ್ಥಾನವಿದೆ. ಮೊದಲ ಸ್ಥಾನದಲ್ಲಿ ಅಮೆರಿಕಾ ಇದೆ.

ಫಿಷಿಂಗ್ ಮೂಲಕ ನಕಲಿ ವೆಬ್‍ಸೈಟ್‍ ಗಳು, ಲಿಂಕ್‍ ಗಳು, ಮೆಸೇಜ್ ಇತ್ಯಾದಿಗಳನ್ನೂ ರಚಿಸಿ, ಅಸಲಿ ವಿವರಗಳನ್ನು ಪಡೆಯುವ ಪ್ರಯತ್ನಗಳೂ ನಡೆಯುತ್ತವೆ. ಭಾರತದಲ್ಲಿ ನಡೆಯುವ ಪ್ರಕರಣಗಳಲ್ಲಿ ನೈಜೀರಿಯಾದ ವಂಚಕರ ತಂಡದ ದೊಡ್ಡ ಪಾಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...