alex Certify
ಕನ್ನಡ ದುನಿಯಾ       Mobile App
       

Kannada Duniya

9 ರೂ. ಪ್ಯಾಕ್ ನಲ್ಲಿ ಬಿಎಸ್ಎನ್ಎಲ್ ನೀಡ್ತಿದೆ ಅನಿಯಮಿತ ಡೇಟಾ

ಬಿಎಸ್ಎನ್ಎಲ್ ವಾರದ ಹಾಗೂ ತಿಂಗಳ ಎರಡು ಆಫರ್ ಬಿಡುಗಡೆ ಮಾಡಿದೆ. 29 ರೂಪಾಯಿ ಹಾಗೂ 9 ರೂಪಾಯಿ ಪ್ಲಾನ್ ನಲ್ಲಿ ಅನಿಯಮಿತ ಕರೆ ಜೊತೆ ಅನಿಯಮಿತ ಡೇಟಾ ಸೌಲಭ್ಯ ಸಿಗ್ತಿದೆ. ಜಿಯೋ, ವೋಡಾಫೋನ್, ಏರ್ಟೆಲ್ ಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ಹೊಸ ಪ್ಲಾನ್ ಶುರು ಮಾಡಿದೆ.

ಬಿಎಸ್ಎನ್ಎಲ್ ನ 29 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಯಾವುದೇ ನೆಟ್ವರ್ಕ್ ನಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್, ಅನಿಯಮಿತ ಡೇಟಾ, 100 ಎಸ್ಎಂಎಸ್ ಪ್ರತಿದಿನ ಸಿಗಲಿದೆ. ವಾಯ್ಸ್ ಕಾಲಿಗೆ ಯಾವುದೇ ಮಿತಿಯಿಲ್ಲ. ಆದ್ರೆ ಡೇಟಾಕ್ಕೆ ಮಿತಿಯಿದ್ದು, ಗ್ರಾಹಕ ಪ್ರತಿದಿನ 2ಜಿಬಿ ಎಫ್ಯುಪಿ ಮಾತ್ರ ಬಳಸಬಹುದಾಗಿದೆ. ಇದಾದ ನಂತ್ರ ಡೇಟಾ ವೇಗ 80  ಕೆಬಿಪಿಎಸ್ ಆಗಲಿದೆ. ಇದೊಂದು ವೀಕ್ಲಿ ಪ್ಯಾಕ್ ಆಗಿದ್ದು, ಈ ಆಪರ್ ಆಗಸ್ಟ್ 10ರಿಂದ 25 ರವರೆಗೆ ಮಾತ್ರ ಲಭ್ಯವಿದೆ.

ಬಿಎಸ್ಎನ್ಎಲ್ 9 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಕೂಡ 29 ರೂಪಾಯಿ ಪ್ಯಾಕ್ ಗೆ ನೀಡಿದ ಸೌಲಭ್ಯವನ್ನೇ ನೀಡ್ತಿದೆ. ಆದ್ರೆ 9 ರೂಪಾಯಿ ಪ್ಯಾಕ್ 1 ದಿನ ಮಾತ್ರ ಸಿಂಧುತ್ವ ಹೊಂದಿರಲಿದೆ. ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆ ಜೊತೆ 100 ಎಸ್ಎಂಎಸ್ ಪಡೆಯಬಹುದಾಗಿದೆ. ಈ ಆಪರ್ ಕೂಡ ಆಗಸ್ಟ್ 10ರಿಂದ 25ರವರೆಗೆ ಮಾತ್ರ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...