alex Certify
ಕನ್ನಡ ದುನಿಯಾ       Mobile App
       

Kannada Duniya

ಆದಾಯ ತೆರಿಗೆ ಪಾವತಿಗೆ ಆ. 5ರ ವರೆಗಿದೆ ಅವಕಾಶ

tax

ಆದಾಯ ತೆರಿಗೆ ಪಾವತಿಗೆ ವಿಧಿಸಿದ್ದ ಗಡುವನ್ನು ಆಗಸ್ಟ್ 5ರವರೆಗೆ ವಿಸ್ತರಿಸಲಾಗಿದೆ. ಇನ್ ಕಮ್ ಟ್ಯಾಕ್ಸ್ ಪಾವತಿಗೆ ಇವತ್ತು ಕೊನೆಯ ದಿನವಾಗಿತ್ತು. ಡೆಡ್ ಲೈನ್ ವಿಸ್ತರಣೆ ಇಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿದ್ವು.

ಆದ್ರೆ ತೆರಿಗೆ ಪಾವತಿದಾರರಿಗೆ ಕೇಂದ್ರ ಸರ್ಕಾರ ಇನ್ನೂ 5 ದಿನಗಳ ಕಾಲಾವಕಾಶ ಮಾಡಿಕೊಟ್ಟಿದೆ. ಈಗಾಗ್ಲೇ ಆನ್ ಲೈನ್ ನಲ್ಲಿ 2 ಕೋಟಿಗೂ ಅಧಿಕ ಐಟಿ ರಿಟರ್ನ್ಸ್ ಮಾಡಲಾಗಿದೆ. ತೆರಿಗೆ ಮಿತಿಯನ್ನು ಮೀರಿದ ಆದಾಯ ಹೊಂದಿರುವ ಪ್ರತಿಯೊಬ್ಬರೂ ರಿಟರ್ನ್ಸ್ ಪಾವತಿಸಬೇಕಿದೆ.

ಕೊನೆಕ್ಷಣದಲ್ಲಿ ಲಕ್ಷಾಂತರ ಮಂದಿ ಏಕಕಾಲಕ್ಕೆ ತೆರಿಗೆ ಪಾವತಿಸಲು ಮುಂದಾಗಿರುವುದರಿಂದ ಸರ್ಕಾರದ ಇ ಫೈಲಿಂಗ್ ವೆಬ್ ಸೈಟ್ ಗಳಿಗೆ ಓವರ್ ಲೋಡ್ ಆಗ್ತಿದೆ. ಹಾಗಾಗಿ ಸರ್ಕಾರ ಇನ್ನೂ 5 ದಿನಗಳ ಕಾಲ ಗಡುವನ್ನು ವಿಸ್ತರಿಸಿದೆ.

ಆಧಾರ್ ನಂಬರ್ ಅನ್ನು ನಿಮ್ಮ ಪ್ಯಾನ್ ಸಂಖ್ಯೆಯ ಜೊತೆ ಲಿಂಕ್ ಮಾಡುವುದು ಕೂಡ ಕಡ್ಡಾಯ. ಯಾರು ಆದಾಯ ತೆರಿಗೆ ಪಾವತಿಸುತ್ತಾರೋ ಅವರೆಲ್ಲ ತಮ್ಮ ಆಧಾರ್ ಮತ್ತು ಪ್ಯಾನ್ ನಂಬರ್ ಅನ್ನು ಲಿಂಕ್ ಮಾಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...