alex Certify
ಕನ್ನಡ ದುನಿಯಾ       Mobile App
       

Kannada Duniya

ಆದಾಯ ತೆರಿಗೆ ವಿವರ ಸಲ್ಲಿಕೆಯಲ್ಲಿ ಭಾರೀ ಹೆಚ್ಚಳ

ಆದಾಯ ತೆರಿಗೆ ವಿವರ ಸಲ್ಲಿಸುವ ಡೆಡ್ ಲೈನ್ ನ್ನ ಸರ್ಕಾರ ಜುಲೈ 31 ರಿಂದ ಆಗಸ್ಟ್ 30 ರವರೆಗೆ ವಿಸ್ತರಿಸಿದ ನಂತರ ಆದಾಯ ವಿವರ ಸಲ್ಲಿಕೆಯಲ್ಲಿ ಭಾರೀ ಬದಲಾವಣೆ ಕಂಡು ಬಂದಿದೆ. ಕಳೆದ ಆರ್ಥಿಕ ವರ್ಷಕ್ಕಿಂತ ಹೆಚ್ಚು ಮಂದಿ ಈ ಬಾರಿ ಆದಾಯ ತೆರಿಗೆಯನ್ನು ಹಿಂಪಡೆಯುವ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

ಇದರಿಂದಾಗಿ ಸರ್ಕಾರ ಕಳೆದ ಬಾರಿಗಿಂತ ಹೆಚ್ಚು ರಿಸ್ಕ್ ಫ್ಯಾಕ್ಟರ್ ಎದುರಿಸಬೇಕಿದೆ. ಅದರಲ್ಲೂ ತೆರಿಗೆ ಹಿಂಪಡೆಯುವ ಸಂಬಂಧ ಸಲ್ಲಿಕೆಯಾಗಿರುವ ಆದಾಯದ ವಿವರಗಳು ಕಳೆದ ಆರ್ಥಿಕ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಹತ್ತಿರ ಹತ್ತಿರ ಮೂರು ಕೋಟಿ ಮಂದಿ ತೆರಿಗೆದಾರರು ತಮ್ಮ ಆದಾಯದಲ್ಲಿ ಕಡಿತವಾಗಿರುವ ಹಣವನ್ನು ಹಿಂಪಡೆಯೋಕೆ ಅರ್ಜಿ ಸಲ್ಲಿಸಿದ್ದಾರೆ.

ಇಲ್ಲಿಯವರೆಗೂ ಸಲ್ಲಿಕೆಯಾದ ಅರ್ಜಿಗಳ ಪೈಕಿ ಶೇಕಡಾ 81 ರಷ್ಟು ಆದಾಯ ತೆರಿಗೆ ವಾಪಸ್ಸಾತಿಯನ್ನ ಕೋರಿ ಅರ್ಜಿ ಸಲ್ಲಿಕೆಯಾಗಿವೆ. ಇವುಗಳ ಪೈಕಿ ಈಗಾಗ್ಲೇ ಶೇಕಡಾ 35 ರಷ್ಟು ಅರ್ಜಿಗಳನ್ನ ಕ್ಲಿಯರ್ ಮಾಡಲಾಗಿದೆ. ಕಳೆದ ಬಾರಿ ಸರ್ಕಾರ ತೆರಿಗೆದಾರರಿಗೆ ಹಿಂದಿರುಗಿಸಿದ ಹಣದ ಮೊತ್ತ 57,551 ಕೋಟಿಯಾಗಿದೆ, ಈ ಬಾರಿ ಅದರ ಪ್ರಮಾಣ 77,700 ಕೋಟಿಗೆ ಹೆಚ್ಚಾಗುವ ಸಾಧ್ಯತೆ ಇದೆ.

ಶೇಕಡಾ 61 ರಷ್ಟು ಇ- ಫೈಲಿಂಗ್ ಆದಾಯ ತೆರಿಗೆ ವಿವರ ಸಲ್ಲಿಕೆಯಾಗಿದೆ. ಆದಾಯ ತೆರಿಗೆ ವಿವರ ಸಲ್ಲಿಸುವಂತಾ ಕೆಲವು ಸರಳ ವಿಧಾನಗಳನ್ನು ಜಾರಿಗೆ ತಂದ ಕಾರಣ ತೆರಿಗೆದಾರರಿಗೆ ಅನುಕೂಲವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ವಿವರ ಸಲ್ಲಿಸಿದವರ ಸಂಖ್ಯೆ 1.06 ಕೋಟಿಯಷ್ಟಿತ್ತು.

ಇಲ್ಲಿವರೆಗೂ 3 ಕೋಟಿ 7 ಲಕ್ಷ ಮಂದಿ ಆದಾಯ ತೆರಿಗೆ ವಿವರವನ್ನು ದಾಖಲಿಸಿದ್ದಾರೆ. ಕಳೆದ ಬಾರಿ ಇದೇ ಸಮಯಕ್ಕೆ ತೆರಿಗೆ ವಿವರ ಸಲ್ಲಿಸಿದವರ ಸಂಖ್ಯೆ 1ಕೋಟಿ 70 ಲಕ್ಷದಷ್ಟಿತ್ತು. ಇದರ ಜೊತೆಗೆ ಆದಾಯ ತೆರಿಗೆ ಇಲಾಖೆ ತೆರಿಗೆ ವಂಚಕರ ಮೇಲೂ ಹದ್ದಿನ ಕಣ್ಣಿಟ್ಟಿದೆ. ಹಲವು ಮೂಲಗಳ ಮೂಲಕ ತೆರಿಗೆ ವಂಚಕರಿಗೆ ಪಾಠ ಕಲಿಸೋದಕ್ಕೆ ಯೋಜನೆಗಳನ್ನ ರೂಪಿಸುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...