alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನಿಸಿ: ಐಟಿಆರ್‌ ಸಲ್ಲಿಕೆಗೆ ನಾಳೆಯೇ ಕೊನೆ ದಿನ

ನವದೆಹಲಿ: ಇನ್‌ಕಂ ಟ್ಯಾಕ್ಸ್‌ ರಿಟರ್ನ್ಸ್‌(ಐಟಿಆರ್) ಸಲ್ಲಿಸಲು ಒಂದು ದಿನವಷ್ಟೇ ಬಾಕಿ ಉಳಿದಿದೆ. ಕೊನೆ ದಿನಗಳಲ್ಲಿ ಎದುರಾಗುವ ತಾಂತ್ರಿಕ ದೋಷಗಳಿಂದ ದೂರ ಉಳಿಯಲು, ಶೀಘ್ರದಲ್ಲೇ ಐಟಿಆರ್‌ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸುವುದು ಉತ್ತಮ. ಇಲ್ಲವಾದಲ್ಲಿ 5 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಡಿ.31 ರ ಬಳಿಕ ಐಟಿಆರ್‌ ಸಲ್ಲಿಸಿದಲ್ಲಿ 10 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.

ಕೇರಳದಲ್ಲಿ ಪ್ರವಾಹ ಉಂಟಾಗಿ ಜನ ಜೀವನ ದುಸ್ಥರವಾಗಿರುವುದರಿಂದ ಆ ಭಾಗದ ಜನರಿಗೆ ಐಟಿಆರ್‌ ಸಲ್ಲಿಸಲು ಕೊನೆ ದಿನಾಂಕ ಆ.31 ರಿಂದ ಸೆ.15ಕ್ಕೆ ವಿಸ್ತರಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ.

ಫಾರಂ16, ಬ್ಯಾಂಕ್‌ ಸ್ಟೇಟ್‌ಮೆಂಟ್‌, 26ಎಎಸ್‌ ಸೇರಿದಂತೆ ಇನ್ನಿತರ ದಾಖಲೆಗಳನ್ನು ಶೀಘ್ರದಲ್ಲಿ ಸಿದ್ದಪಡಿಸಿದಲ್ಲಿ, ದಂಡ ಕಟ್ಟುವುದು ತಪ್ಪುತ್ತದೆ. ವಾರ್ಷಿಕ 5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ದಂಡ 1 ಸಾವಿರ ರೂ.ಗಿಂತ ಕಡಿಮೆ ಇರುತ್ತದೆ ಎಂದು ಸಿಬಿಡಿಟಿ ಹೇಳಿದೆ. ಐಟಿಆರ್‌ ಸಲ್ಲಿಸಲು ಈ ಹಿಂದೆ ಜು.31 ಕೊನೆ ದಿನವಾಗಿತ್ತು. ಇದನ್ನು ಒಂದು ತಿಂಗಳ ಕಾಲ ವಿಸ್ತರಿಸಿ ಸಿಬಿಡಿಟಿ ಆದೇಶಿತ್ತು.

ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ಟ್ವಿಟರ್‌ನಲ್ಲಿ ಐಟಿಆರ್‌ ಫೈಲ್‌ ಮಾಡುವಂತೆ ಮನವಿ ಮಾಡಿದ್ದಾರೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಅವರು ಟ್ವಿಟರ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...