alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಬರ್ ಕ್ರೈಂ ವಿರುದ್ಧ ವೈಯಕ್ತಿಕ ವಿಮೆ

ಸೈಬರ್ ಕ್ರೈಂ ವಿರುದ್ಧ ನೀವು ವೈಯಕ್ತಿಕವಾಗಿ ವಿಮೆ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿ ಈ ಅವಕಾಶವನ್ನು ನೀಡಲಾಗ್ತಿದೆ. ಆನ್ಲೈನ್ ವಂಚನೆ,ಗುರುತಿನ ಕಳ್ಳತನ,ಆರ್ಥಿಕ ನಷ್ಟ,ಸೈಬರ್ ಸ್ಟಾಕಿಂಗ್ ಹಾಗೂ ವಸೂಲಿ,ಫಿಶಿಂಗ್ ನಿಂದಾಗುವ ನಷ್ಟವನ್ನು ಈ ವಿಮೆ ಒಳಗೊಂಡಿರುತ್ತದೆ.

ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಸೈಬರ್ ಸೇಫ್ ಪಾಲಿಸಿಯನ್ನು ಪರಿಚಯಿಸಿದೆ. ವೈಯಕ್ತಿಕವಾಗಿ ಇಂಟರ್ನೆಟ್ ಬಳಸುವ ಹಾಗೂ ಇ-ಕಾಮರ್ಸ್ ಕಂಪನಿಗಳ ಉಪಯೋಗ ಪಡೆಯುವವರಿಗೆ ಇದು ಅನುಕೂಲವಾಗಲಿದೆ. ಅನೇಕ ವರ್ಷಗಳಿಂದಲೇ ಕಂಪನಿಗಳಿಗೆ ವಿಮೆ ಸೌಲಭ್ಯ ನೀಡಲಾಗಿದೆ. ಸೈಬರ್ ಲಯೇಬಿಲಿಟಿ ಕವರ್ ಪಾಲಿಸಿ ಜಾರಿಯಲ್ಲಿದೆ. ಆದ್ರೆ ಇದು ವ್ಯಕ್ತಿಗೆ ನೆರವಾಗುತ್ತಿರಲಿಲ್ಲ.

ವೈಯಕ್ತಿಕವಾಗಿ ವ್ಯಕ್ತಿಯೊಬ್ಬ ಇದನ್ನು ಖರೀದಿ ಮಾಡಲು ಸಾಧ್ಯವಿರಲಿಲ್ಲ. ಬಜಾಜ್ ಅಲಿಯನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ತಪನ್ ಸಿಂಘಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ನಮ್ಮ ಮೊದಲ ಪಾಲಿಸಿಯಾಗಿದೆ. ವೈಯಕ್ತಿಕವಾಗಿ ಹೆಚ್ಚಾಗುತ್ತಿರುವ ಸೈಬರ್ ಕ್ರೈಂ ಗಮನದಲ್ಲಿಟ್ಟುಕೊಂಡು ಈ ವಿಮೆ ಶುರುಮಾಡಲಾಗಿದೆ ಎಂದವರು ಹೇಳಿದ್ದಾರೆ.

ಪಾಲಿಸಿ ಒಂದು ಲಕ್ಷದಿಂದ ಒಂದು ಕೋಟಿ ರೂಪಾಯಿವರೆಗಿದೆ. ಆದ್ರೆ ಪ್ರೀಮಿಯಂ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...