alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ಬ್ಯಾಂಕ್ ಸಿಬ್ಬಂದಿ ವೇತನದಲ್ಲಾಗಲಿದೆ ದೊಡ್ಡ ಬದಲಾವಣೆ

ಖಾಸಗಿ ವಲಯ ಬ್ಯಾಂಕ್ ಗಳಂತೆ ಸರ್ಕಾರಿ ಬ್ಯಾಂಕ್ ಸಿಬ್ಬಂದಿಗೆ ವೇತನ ನೀಡುವ ಯೋಜನೆ ಮೇಲೆ ಕೆಲಸ ನಡೆಯುತ್ತಿದೆ. ಈ ಯೋಜನೆ ಮೊದಲು ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾದಲ್ಲಿ ಜಾರಿಗೆ ಬರಲಿದೆ. ಉನ್ನತ ಅಧಿಕಾರಿಗಳು, ಜನರಲ್ ಮ್ಯಾನೇಜರ್ ಇದ್ರಡಿಯಲ್ಲಿ ಬರಲಿದ್ದಾರೆ. ಆದ್ರೆ ಸರ್ಕಾರದ ಈ ನಿರ್ಧಾರಕ್ಕೆ ಬ್ಯಾಂಕ್ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.

ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆ ನೋಡಿ ವೇತನ ನೀಡಲಾಗುತ್ತದೆ. ಈ ಮೊತ್ತ ಸರ್ಕಾರಿ ಬ್ಯಾಂಕ್ ಗಳಿಗಿಂತ ಎರಡು ಪಟ್ಟು ಹೆಚ್ಚಿರುತ್ತದೆ. ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್, ಬ್ಯಾಂಕ್ ಯೂನಿಯನ್ ಪ್ರತಿನಿಧಿಗಳು ಹಾಗೂ ಯುಎಫ್ ಬಿಯು ಸರ್ಕಾರಿ ಬ್ಯಾಂಕ್ ಸಿಬ್ಬಂದಿ ಸಂಬಳವನ್ನು ನಿರ್ಧರಿಸುತ್ತಿದೆ. ಬೇರೆ ಬೇರೆ ಮಟ್ಟದ ಅಧಿಕಾರಿಗಳಿಗೆ ಬೇರೆ ಬೇರೆ ವೇತನ ಹಾಗೂ ಭತ್ಯೆಯಿದೆ. ಹೊಸ ನೀತಿ ಜಾರಿಗೆ ಬಂದ್ರೆ ತೃತೀಯ ಮಟ್ಟದ ಅಧಿಕಾರಿಗಳಿಂದ ಜನರಲ್ ಮ್ಯಾನೇಜರ್ ವರೆಗೆ ಲಾಭವಾಗಲಿದೆ.

2017 ರಿಂದಲೂ ಈ ಬಗ್ಗೆ ವಾದ-ವಿವಾದ ನಡೆಯುತ್ತಿದೆ. ಎರಡು ಪಟ್ಟು ಸಂಬಳ ಹೆಚ್ಚು ಮಾಡುವಂತೆ ಐಬಿಎ ಒತ್ತಾಯ ಮಾಡ್ತಿದೆ. ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳು ಮೂರು ದಿನಗಳ ಕಾಲ ಪ್ರತಿಭಟನೆ ಕೂಡ ನಡೆಸಿದ್ದರು. ಸರ್ಕಾರ, ಸರ್ಕಾರಿ ಬ್ಯಾಂಕ್ ಗಳ ಖಾಸಗೀಕರಣಕ್ಕೆ ಮುಂದಾಗ್ತಿದೆ. ಕಾರ್ಯಕ್ಷಮತೆ ಆಧರಿಸಿ ಸಂಬಳ ನೀಡುವುದು ಅದ್ರ ಒಂದು ಭಾಗ. ಇದು ಜಾರಿಗೆ ಬಂದಲ್ಲಿ ಖಾಸಗಿ-ಸರ್ಕಾರಿ ಬ್ಯಾಂಕ್ ಮಧ್ಯೆಯಿರುವ ಅಂತರ ಕಡಿಮೆಯಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...