alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿ ವಾಹನ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ

ಭಾರತದ ಅಟೋಮೊಬೈಲ್ ಕಂಪನಿಗಳ ಪಾಲಿಗೆ ಸಿಹಿ ಸುದ್ದಿಯೊಂದಿದೆ. ಬದಲಾದ ನೀತಿಯ ಪ್ರಕಾರ ಈಗ ಅಟೋಮೊಬೈಲ್ ಕಂಪನಿಗಳು ಅಥವಾ ಕಂಪನಿಗಳ ಪ್ರತಿನಿಧಿಗಳು ವಿದೇಶಿ ವಾಹನಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅದೂ ಬೆಲೆ ಮತ್ತು ಎಂಜಿನ್ ಸಾಮರ್ಥ್ಯ ಮಿತಿಯ ಶರತ್ತುಗಳಿಲ್ಲದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೇಂದ್ರ ಸಾರಿಗೆ ಸಚಿವಾಲಯ ಪ್ರತಿಯೊಂದು ಕಂಪನಿ ದ್ವಿಚಕ್ರ ವಾಹನವಾದರೆ ವರ್ಷಕ್ಕೆ ಗರಿಷ್ಠ 2500 ಯೂನಿಟ್ ಮತ್ತು ಅಷ್ಟೇ ಸಂಖ್ಯೆಯ ನಾಲ್ಕು ಚಕ್ರದ ವಾಹನ ಆಮದು ಮಾಡಿಕೊಳ್ಳಬಹುದು. ಬಸ್ಸು, ಟ್ರಕ್ಕುಗಳಾದರೆ ಗರಿಷ್ಠ 500 ಆಮದು ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಆದರೆ ವಾಹನಗಳು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದ್ದು, ಭಾರತೀಯ ನಿಯಮಗಳಿಗೆ ಹೊಂದಿಕೊಳ್ಳುವ ರೈಟ್ ಹ್ಯಾಂಡ್ ಸ್ಟೇರಿಂಗ್ ಗಳನ್ನು ಹೊಂದಿರಬೇಕು ಎಂದು ಹೇಳಿದೆ.

ಭಾರತದಲ್ಲೂ ಕಾರು ಉತ್ಪಾದನೆ ಬ್ರೇಕಿಲ್ಲದೆ ಸಾಗಿರುವ ಇಂದಿನ ದಿನಗಳಲ್ಲಿ ಈ ನೀತಿ ಹೇಗೆ ಪರಿಣಾಮ ಬೀರಲಿದೆ ಎಂಬ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ಹೊಸ ನೀತಿ ಭಾರತದ ಆಟೋಮೋಬೈಲ್ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ನಿಸ್ಸಾನ್, ಟೊಯೇಟಾ, ಮರ್ಸಿಡಿಸ್, ಬಿಎಂಡಬ್ಲ್ಯೂ ಮುಂತಾದ ಐಷಾರಾಮಿ ಕಾರು ಕಂಪನಿಗಳಿಗೂ ತಮ್ಮ ವಿನೂತನ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲು ಹಾದಿ ಸುಗಮವಾಗಲಿದೆ ಎಂದೂ ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...