alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದ್ರಾಬಾದ್ ನಲ್ಲಿ ಶುರುವಾಯ್ತು ದೇಶದ ಮೊದಲ ಐಕಿಯಾ ಮಳಿಗೆ

ವಿಶ್ವದ ಪ್ರಸಿದ್ಧ ಉಪಕರಣ ಮಾರಾಟ ಸಂಸ್ಥೆ ಐಕಿಯಾ ಭಾರತವನ್ನು ಪ್ರವೇಶಿಸಿದೆ. ಹೈದ್ರಾಬಾದ್ ನಲ್ಲಿ ಐಕಿಯಾದ ಮೊದಲ ಮಳಿಗೆ ಶುರು ಮಾಡಿದೆ. ಒಂದು ಸಾವಿರ ಕೋಟಿ ವೆಚ್ಚದಲ್ಲಿ ಹೈಟೆಕ್ ಸಿಟಿ ಹೆಸರಿನ ಮಳಿಗೆ ಗುರುವಾರದಿಂದ ಕಾರ್ಯಾರಂಭ ಮಾಡಿದೆ.

13 ಎಕರೆ ವಿಸ್ತೀರ್ಣದ ಈ ಮಳಿಗೆ ಅದ್ಭುತವಾಗಿದೆ. ಹೈದ್ರಾಬಾದ್ ನಲ್ಲಿ ಆರಂಭವಾದ ಈ ಮಳಿಗೆಯಲ್ಲಿ 7500 ಉತ್ಪನ್ನಗಳಿವೆ. ಸುಮಾರು 1000ಕ್ಕೂ ಹೆಚ್ಚು ಉತ್ಪನ್ನಗಳ ಬೆಲೆ 200 ರೂಪಾಯಿ ಹಾಗೂ ಅದಕ್ಕಿಂತ ಕಡಿಮೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಒಂದು ವರ್ಷದಲ್ಲಿ 60 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುವ ಪ್ಲಾನ್ ಐಕಿಯಾ ಹೊಂದಿದೆ. ಭಾರತದಲ್ಲಿ ಮಳಿಗೆ ಶುರುಮಾಡುವ ಮೊದಲು ಐಕಿಯಾ ಭಾರತದ ಅನೇಕ ಮನೆಗಳಿಗೆ ಹೋಗಿ ಸರ್ವೆ ಮಾಡಿದೆ. ಜನರ ಸರಾಸರಿ ಸಂಬಳ, ಜೀವನ ಶೈಲಿಯ ಬಗ್ಗೆ ವರದಿ ಪಡೆದು ಭಾರತೀಯರಿಗೆ ಅನುಕೂಲವಾಗುವಂತಹ ಉತ್ಪನ್ನ ನೀಡಲು ಮುಂದಾಗಿದೆ.

ಪೀಠೋಪಕರಣದ ಮಳಿಗೆ ಜೊತೆ ಕಂಪನಿ ರೆಸ್ಟೋರೆಂಟ್ ಕೂಡ ತೆರೆದಿದೆ. ಒಂದೇ ಬಾರಿ ಸಾವಿರಾರು ಜನರು ಈ ರೆಸ್ಟೋರೆಂಟ್ ನಲ್ಲಿ ಆಹಾರ ಸೇವನೆ ಮಾಡಬಹುದಾಗಿದೆ. ಸಮೋಸಾ, ಸಾಂಬಾರ್, ಇಡ್ಲಿಯಂತಹ ಆಹಾರದ ರುಚಿ ಸವಿಯಬಹುದಾಗಿದೆ.

12 ವರ್ಷಗಳ ತಯಾರಿ ನಂತ್ರ ಕೊನೆಗೂ ಭಾರತದಲ್ಲಿ ಮಳಿಗೆ ಶುರುವಾಗಿದೆ. ಮಳಿಗೆಯಲ್ಲಿ 950 ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ. ಅದ್ರಲ್ಲಿ ಅರ್ಧದಷ್ಟು ಮಹಿಳೆಯರು ಎಂದು ಕಂಪನಿ ಹೇಳಿದೆ. ಭಾರತ ನಮಗೆ ಪ್ರಮುಖ ಮಾರುಕಟ್ಟೆಯಾಗಿದ್ದು, ಇನ್ನೂ 40 ಮಳಿಗೆ ತೆರೆಯುವ ತಯಾರಿಯಲ್ಲಿದ್ದೇವೆಂದು ಕಂಪನಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...