alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ದೆಹಲಿ ವಿದ್ಯಾರ್ಥಿಗೆ ಸಿಗ್ತಿರೋ ವೇತನವೆಷ್ಟು ಗೊತ್ತಾ…?

ಐಐಟಿ ದೆಹಲಿ ವಿದ್ಯಾರ್ಥಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳಿಂದ ಉದ್ಯೋಗದ ಆಫರ್ ಸಿಕ್ಕಿದೆ. ಅದು ಕೂಡ ಒಂದು ಕೋಟಿ ರೂಪಾಯಿಗೂ ಅಧಿಕ ವೇತನದ ಆಫರ್ ಸಿಕ್ಕಿರೋದು ವಿಶೇಷ. 2 ದಿನಗಳಿಂದ ಐಐಟಿ ದೆಹಲಿಯಲ್ಲಿ ಕ್ಯಾಂಪಸ್ ಇಂಟರ್ವ್ಯೂ ನಡೆಯುತ್ತಿದೆ.

ಮೊದಲ ದಿನವೇ ಮೈಕ್ರೋಸಾಫ್ಟ್ ಕಂಪನಿ ವಿದ್ಯಾರ್ಥಿಗೆ 1.4 ಕೋಟಿ ರೂ. ಸಂಬಳದ ಆಫರ್ ಕೊಟ್ಟಿದೆ. ಸಿಟಿಸಿ ಪ್ರಕಾರ ಇದು ಈ ವರ್ಷದ ಅತಿ ದೊಡ್ಡ ಆಫರ್ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿಸೆಂಬರ್ 15ರವರೆಗೆ ಮೊದಲ ಸುತ್ತಿನ ಪ್ಲೇಸ್ಮೆಂಟ್ ಪ್ರಕ್ರಿಯೆ ನಡೆಯಲಿದೆ.

ಜನವರಿ ತಿಂಗಳಿನಿಂದ ಮತ್ತಷ್ಟು ಕಂಪನಿಗಳು ಅರ್ಹ ಉದ್ಯೋಗಿಗಳ ಹುಡುಕಾಟಕ್ಕಾಗಿ ಕಾಲೇಜಿಗೆ ಬರಲಿವೆ. ಮೈಕ್ರೋಸಾಫ್ಟ್, ಒರಾಕಲ್ ಇಂಡಿಯಾ, ಅಮೆರಿಕನ್ ಎಕ್ಸ್ ಪ್ರೆಸ್ ಸೇರಿದಂತೆ ಪ್ರಮುಖ ಕಂಪನಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ. ಕಳೆದ ವರ್ಷ ಒಟ್ಟು 200 ಕಂಪನಿಗಳು 350 ವಿದ್ಯಾರ್ಥಿಗಳಿಗೆ ಉದ್ಯೋಗದ ಆಫರ್ ನೀಡಿದ್ದವು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...