alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿಯ ಮೊಬೈಲ್ ಹೊಂದಿದವರಿಗೆ ‘ಶಾಕಿಂಗ್’ ಸುದ್ದಿ

ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಮತ್ತು ಆಪಲ್ ಕಂಪನಿ ನಡುವಿನ ಹಗ್ಗಜಗ್ಗಾಟಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಟ್ರಾಯ್ ನ ನಿಯಮವೊಂದನ್ನ ಅಳವಡಿಸಿಕೊಳ್ಳದ ಪಕ್ಷದಲ್ಲಿ ಆಪಲ್ ಕಂಪನಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಹೊಡೆತ ಬೀಳಲಿದೆ. ಆಪಲ್ ಕಂಪನಿಯ ಮೊಬೈಲ್ಗ ಳಲ್ಲಿ ನೆಟ್ವರ್ಕ್ ಇಲ್ಲದಂತಾಗುವ ಪ್ರಮೇಯ ಬಂದೊದಗಿದೆ.

ಈ ಹಿಂದೆ ಟ್ರಾಯ್ ವಂಚಕ ಕರೆಗಳ ಮಾಹಿತಿಯನ್ನು ಪಡೆಯುವ ಸಂಬಂಧ ಡಿಎನ್ಡಿ ಆಪ್ ಅಳವಡಿಸಿಕೊಳ್ಳಬೇಕು ಅನ್ನೋ ಷರತ್ತನ್ನ ಆಪಲ್ ಕಂಪನಿಗೆ ವಿಧಿಸಿತ್ತು. ಆದ್ರೆ ಗ್ರಾಹಕರ ನಂಬಿಕೆಯ ದೃಷ್ಟಿಯಿಂದ ಮತ್ತು ಸಂಸ್ಥೆಯ ಥರ್ಡ್ ಪಾರ್ಟಿ ಆಪ್ ಗಳ ಪಾಲಿಸಿಗೆ ಧಕ್ಕೆಯಾಗುವ ಹಿನ್ನಲೆಯಲ್ಲಿ ಈ ಷರತ್ತಿಗೆ ಆಪಲ್ ಕಂಪನಿ ಒಪ್ಪಿಕೊಂಡಿರಲಿಲ್ಲ. ಆದ್ರೆ ಈಗ ಮತ್ತೊಮ್ಮೆ ಟ್ರಾಯ್ ಮೊಬೈಲ್ ಸಂಸ್ಥೆಗಳಿಗೆ ನೂತನ ಮತ್ತು ಕಡ್ಡಾಯ ನಿಯಮಾವಳಿಗಳನ್ನ ಘೋಷಿಸಿದೆ.

ಜುಲೈ 19ರಂದು ಘೋಷಣೆಯಾಗಿರುವ ನೂತನ ನಿಯಮಾವಳಿಗಳ ಪ್ರಕಾರ ಆರು ತಿಂಗಳ ಒಳಗೆ ಎಲ್ಲಾ ಮೊಬೈಲ್ ತಯಾರಿಕಾ ಕಂಪನಿಗಳು ಬೇಡದ ಮತ್ತು ವಂಚಕ ಕರೆಗಳು ಮತ್ತು ಮೆಸೇಜ್ ಗಳ ಡೇಟಾವನ್ನು ಸಂಗ್ರಹಿಸುವ ಆಪ್ ನ್ನ ಮೊಬೈಲ್ನಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕು. ಇದಕ್ಕೆ ಸಮ್ಮತಿಸದಿದ್ದಲ್ಲಿ ಗಂಭೀರ ಪರಿಣಾಮಗಳನ್ನು ಮೊಬೈಲ್ ತಯಾರಿಕಾ ಸಂಸ್ಥೆಗಳು ಎದುರಿಸಬೇಕಾಗಲಿದೆ ಅಂತ ಟ್ರಾಯ್ ಎಚ್ಚರಿಕೆ ನೀಡಿದೆ.

ಆರು ತಿಂಗಳ ಒಳಗಾಗಿ ಮೊಬೈಲ್ ತಯಾರಿಕಾ ಕಂಪನಿಗಳು ಆಪ್ ಗಳ ಉಪಯೋಗಕ್ಕಾಗಿ ಸಂಪರ್ಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಿದೆ. ಒಂದು ವೇಳೆ ಈ ನಿಯಮವನ್ನು ಮೀರಿದ ಮೊಬೈಲ್ ತಯಾರಿಕಾ ಸಂಸ್ಥೆಗಳ ದೂರ ಸಂಪರ್ಕ ಸೇವೆಯನ್ನ ನಿಲ್ಲಿಸೋದಾಗಿ ಟ್ರಾಯ್ ಆದೇಶ ನೀಡಲಿದೆ.

ಒಂದು ವೇಳೆ ಈ ನಿಯಮವನ್ನು ಆಪಲ್ ಮೀರಿದ್ರೆ ನೆಟ್ವರ್ಕ್ ಸಂಸ್ಥೆಗಳಿಗೆ ಆಪಲ್ ಮೊಬೈಲ್ಗಳಿಗೆ ನೀಡ್ತಿರುವ ಸೇವೆಯನ್ನ ಹಿಂಪಡೆಯುವಂತಾ ನೇರ ಅಧಿಕಾರ ಟ್ರಾಯ್ ಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಪಲ್ ಡಿಎನ್ಡಿ ಆಪ್ಗೆ ಕಾರ್ಯ ವೈಖರಿಯನ್ನೇ ಹೋಲುವ ತನ್ನದೇ ಆಪ್ ನ್ನ ಅಭಿವೃದ್ಧಿಪಡಿಸಿದ್ದು, ಅದನ್ನೇ ತನ್ನ ಮೊಬೈಲ್ಗಳಲ್ಲಿ ಬಳಸಿಕೊಳ್ಳೋದಕ್ಕೆ ಟ್ರಾಯ್ ನ ಅನುಮತಿಯನ್ನ ಕೇಳುತ್ತಿದೆ ಆಪಲ್ ಸಂಸ್ಥೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...