alex Certify
ಕನ್ನಡ ದುನಿಯಾ       Mobile App
       

Kannada Duniya

ಐಡಿಯಾ-ವೊಡಾಫೋನ್ ವಿಲೀನಕ್ಕೆ ವೇದಿಕೆ ಸಜ್ಜು

download

ಟೆಲಿಕಾಂ ಕಂಪನಿಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಐಡಿಯಾ ಹಾಗೂ ವೊಡಾಫೋನ್ ಕಂಪನಿಗಳ ವಿಲೀನವಾಗ್ತಾ ಇದೆ. ಐಡಿಯಾ ಸೆಲ್ಯೂಲರ್ ವೊಡಾಫೋನ್ ವಿಲೀನಕ್ಕೆ ಒಪ್ಪಿಗೆ ಸೂಚಿಸಿದೆ.

ಈ ವಿಲೀನದ ಜೊತೆಗೆ ದೇಶದ ಅತಿ ದೊಡ್ಡ ಮೊಬೈಲ್ ಆಪರೇಟರ್ ಆಗಲಿದೆ ಈ ಎರಡು ಕಂಪನಿ. ಈ ಕಂಪನಿ ವಿಲೀನದ ಜೊತೆಗೆ ಶೇರು ಮಾರುಕಟ್ಟೆಯ ಬಗ್ಗೆ ವರದಿ ನೀಡಿದೆ. ಹೊಸ ಒಪ್ಪಂದದ ನಂತ್ರ ಕಂಪನಿ 40 ಕೋಟಿ ಗ್ರಾಹಕರನ್ನು ಹೊಂದಿರುವ ಬೃಹತ್ ದೂರಸಂಪರ್ಕ ಸಂಸ್ಥೆಯಾಗಲಿದೆ.

ಐಡಿಯಾ ಸೆಲ್ಯೂಲರ್ ವೊಡಾಫೋನ್ ಇಂಡಿಯಾ ಲಿಮಿಟೆಡ್ ಮತ್ತು ವೊಡಾಫೋನ್ ಮೊಬೈಲ್ ಸರ್ವೀಸ್ ಲಿಮಿಟೆಡ್ ಜೊತೆ ವಿಲೀನಕ್ಕೆ ಒಪ್ಪಿಗೆ ನೀಡಿದೆ. ಇದಕ್ಕೂ ಮೊದಲು ಗ್ರಾಹಕರ ಆಧಾರದ ಮೇಲೆ ವೊಡಾಫೋನ್ ಎರಡನೇ ಹಾಗೂ ಐಡಿಯಾ ಮೂರನೇ ಸ್ಥಾನದಲ್ಲಿತ್ತು.

ವಿಲೀನದ ನಂತ್ರ ವೊಡಾಫೋನ್ ಬಳಿ ಶೇಕಡಾ 45 ಹಾಗೂ ಐಡಿಯಾ ಬಳಿ ಶೇಕಡಾ 26 ರಷ್ಟು ಪಾಲುದಾರಿಕೆ ಇರಲಿದೆ. ಅನೇಕ ದಿನಗಳಿಂದ ಈ ಬಗ್ಗೆ ಸುದ್ದಿಗಳು ಕೇಳಿಬರ್ತಾ ಇದ್ದವು. ಜಿಯೋ ಹಾವಳಿಯಿಂದ ಕಂಪನಿ ಈ ನಿರ್ಧಾರಕ್ಕೆ ಬಂದಿದೆ ಎಂಬ ಮಾತುಗಳೂ ಇವೆ. ವಿಲೀನದಿಂದಾಗಿ 10-25 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಟೆಲಿಕಾಂ ವಲಯದಲ್ಲಿ 3 ಲಕ್ಷ ಮಂದಿ ಕೆಲಸ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...