alex Certify
ಕನ್ನಡ ದುನಿಯಾ       Mobile App
       

Kannada Duniya

ಐಡಿಯಾ ಹೊಸ ಪ್ಲಾನ್ ನಲ್ಲಿ ದಿನಕ್ಕೆ 1.5 ಜಿಬಿ ಡೇಟಾ

ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ತೀವ್ರವಾಗಿದೆ. ಕಂಪನಿಗಳು ಹೊಸ ಹೊಸ ಆಫರ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಐಡಿಯಾ ಕೂಡ 309 ರೂಪಾಯಿಯ ಹೊಸ ಪ್ಲಾನ್ ಬಿಡುಗಡೆ ಮಾಡಿದೆ. 309 ರೂಪಾಯಿ ರೀಚಾರ್ಜ್ ಮಾಡಿದ್ರೆ ಐಡಿಯಾ ಗ್ರಾಹಕರಿಗೆ ಪ್ರತಿದಿನ 1.5 ಜಿಬಿ 4ಜಿ ಡೇಟಾ ದೊರೆಯಲಿದೆ.

28 ದಿನಗಳ ವ್ಯಾಲಿಡಿಟಿ ಇದ್ದು, ಒಂದು ತಿಂಗಳಿಗೆ 42 ಜಿಬಿ ಡೇಟಾ ಬಳಸಬಹುದು. ಪ್ರತಿದಿನ 250 ನಿಮಿಷ ಉಚಿತ ಕರೆ ಮಾಡಲು ಅವಕಾಶವಿದೆ. ವಾರಕ್ಕೆ 1000 ನಿಮಿಷಗಳ ಫ್ರೀ ಕಾಲಿಂಗ್ ಸೇವೆಯನ್ನು ನೀಡಲಾಗಿದೆ. ನಿಗದಿತ ಮಿತಿಯನ್ನು ಮೀರಿದ್ರೆ 1 ಸೆಕೆಂಡ್ ಗೆ 1 ಪೈಸಾ ಚಾರ್ಜ್ ಮಾಡಲಾಗುತ್ತದೆ.

100 ಫ್ರೀ ಎಸ್ ಎಂ ಎಸ್ ಮಾಡಬಹುದು. ನಂತರ ಒಂದು SMS ಗೆ 1 ರೂಪಾಯಿ ಕಟ್ ಆಗುತ್ತದೆ. ರಿಲಯೆನ್ಸ್ ಜಿಯೋ ಕೂಡ 309 ರೂ. ಪ್ಲಾನ್ ಬಿಡುಗಡೆ ಮಾಡಿದ್ದು, 49 ದಿನಗಳ ಕಾಲ ಗ್ರಾಹಕರಿಗೆ ಪ್ರತಿನಿತ್ಯ 1 ಜಿಬಿ ಡೇಟಾ, ಹಾಗೂ ಅನ್ ಲಿಮಿಟೆಡ್ ಫ್ರೀ ಕಾಲ್ ಸೇವೆ ನೀಡುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...