alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಟಕ್ಕರ್ ನೀಡಲು ಈ ಕಂಪನಿ ಪ್ರತಿದಿನ ನೀಡ್ತಿದೆ 5ಜಿಬಿ ಡೇಟಾ

ಐಡಿಯಾ ಹೊಸ ಪ್ರಿಪೇಯ್ಡ್ ಪ್ಯಾಕ್ ಶುರು ಮಾಡಿದೆ. ಈ ಆಫರ್ ನಲ್ಲಿ ಅನಿಯಮಿತ ಕರೆ ಜೊತೆ ಪ್ರತಿದಿನ 5ಜಿಬಿ 4ಜಿ ಹಾಗೂ 2ಜಿ ಡೇಟಾ ಸಿಗಲಿದೆ. ಈ ಪ್ಯಾಕ್ ನಲ್ಲಿ ಪ್ರತಿ ದಿನ 100 ಎಸ್ ಎಂಎಸ್ ಕೂಡ ಸಿಗಲಿದೆ. ಈ ಪ್ಲಾನ್ ಬೆಲೆ 998 ರೂಪಾಯಿಯಾಗಿದ್ದು, ಇದ್ರ ವ್ಯಾಲಿಡಿಟಿ 35 ದಿನವಿರಲಿದೆ.

ಈ ಪ್ಲಾನ್ ಮೂಲಕ ಐಡಿಯಾ ಏರ್ಟೆಲ್  ಹಾಗೂ ಜಿಯೋದ 799 ಪ್ಲಾನ್ ಗೆ ಟಕ್ಕರ್ ನೀಡಲಿದೆ. ಈ ಯೋಜನೆ ಜೊತೆ ಐಡಿಯಾ ಚಂದಾದಾರರಿಗೆ ಮ್ಯಾಜಿಕ್ ಆಫರ್ ಕೂಡ ನೀಡ್ತಿದೆ. ಐಡಿಯಾ ಆ್ಯಪ್ ಅಥವಾ ವೆಬ್ ಸೈಟ್ ಜೊತೆ ರಿಚಾರ್ಜ್ ಮಾಡಿದಲ್ಲಿ 3,300 ರೂಪಾಯಿಯವರೆಗೆ ಕ್ಯಾಶ್ಬ್ಯಾಕ್ ಕೂಡ ಸಿಗಲಿದೆ.

ಜಿಯೋ 799 ರೂಪಾಯಿ ಯೋಜನೆಯಲ್ಲಿ 28 ದಿನಗಳವರೆಗೆ 5ಜಿಬಿ 4ಜಿ ಡೇಟಾ ನೀಡ್ತಾಯಿದೆ. ಅನಿಯಮಿತ ಧ್ವನಿ ಕರೆ ಜೊತೆ ಎಸ್ ಎಂ ಎಸ್ ಸೌಲಭ್ಯವನ್ನು ಗ್ರಾಹಕರಿಗೆ ನೀಡಿದೆ. ಇನ್ನು ಏರ್ಟೆಲ್ 799 ಪ್ಲಾನ್ ನಲ್ಲಿ ಪ್ರತಿ ದಿನ ಕೇವಲ 3.5 ಜಿಬಿ 4ಜಿ ಡೇಟಾ ನೀಡ್ತಿದೆ. ಈ ಪ್ಲಾನ್ ವ್ಯಾಲಿಡಿಟಿ 28 ದಿನವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...