alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಟಕ್ಕರ್ ನೀಡಲು ಐಡಿಯಾ ಶುರುಮಾಡಿದೆ ಅಗ್ಗದ ಯೋಜನೆ

ಇತ್ತೀಚೆಗಷ್ಟೆ ರಿಚಾರ್ಜ್ ಮಾಡಿದ್ರೆ ಶೇಕಡಾ 100ರಷ್ಟು ಕ್ಯಾಶ್ಬ್ಯಾಕ್ ಆಫರ್ ಯೋಜನೆ ಜಾರಿಗೆ ತಂದಿರುವ ಐಡಿಯಾ ಈಗ ಮತ್ತೊಂದು ಅಗ್ಗದ ಯೋಜನೆ ಶುರು ಮಾಡಿದೆ. ರಿಲಾಯನ್ಸ್ ಜಿಯೋ ಪ್ಲಾನ್ ಗೆ ಟಕ್ಕರ್ ನೀಡಲು ಐಡಿಯಾ ಈ ಯೋಜನೆ ಜಾರಿಗೆ ತಂದಿದೆ.

309 ರೂಪಾಯಿ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 1ಜಿಬಿ ಹೈ ಸ್ಪೀಡ್ ಡೇಟಾ ಸಿಗಲಿದೆ. ಇದ್ರ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಸಿಗ್ತಿದೆ. ಈ ಯೋಜನೆ ವಿಶೇಷವೆಂದ್ರೆ ರೋಮಿಂಗ್ ನಲ್ಲಿಯೂ ಗ್ರಾಹಕರಿಗೆ ಅನಿಯಮಿತ ಕರೆ ಸಿಗಲಿದೆ. ಈ ಪ್ಲಾನ್ ಮಿತಿ 28 ದಿನ.

ಇದಕ್ಕಿಂತ ಮೊದಲು ಐಡಿಯಾ 357 ರೂಪಾಯಿಗೆ ಈ ಪ್ಲಾನ್ ನೀಡಿದೆ. ಇದ್ರಲ್ಲಿ ಡೇಟಾ ಮಿತಿ ದಿನಕ್ಕೆ 1.5 ಜಿಬಿ. ಜೊತೆಗೆ ಈ ಯೋಜನೆಯಲ್ಲಿ ಐಡಿಯಾ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಶೇಕಡಾ 100ರಷ್ಟು ಕ್ಯಾಶ್ಬ್ಯಾಕ್ ನೀಡ್ತಿದೆ. ಕೆಲ ಷರತ್ತಿನ ಮೂಲಕ ಐಡಿಯಾ ಶೇಕಡಾ 100ರಷ್ಟು ಕ್ಯಾಶ್ಬ್ಯಾಕ್ ಸೌಲಭ್ಯವನ್ನು ಗ್ರಾಹಕರಿಗೆ ನೀಡಿದೆ. ಟೆಲಿಕಾಂ ಕಂಪನಿಯಲ್ಲಿ ಡೇಟಾ ಯುದ್ಧ ಶುರುವಾಗಿದ್ದು, ಒಂದೊಂದು ಕಂಪನಿಗಳು ಒಂದೊಂದು ಅಗ್ಗದ ಯೋಜನೆ ಶುರುಮಾಡಿ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...