alex Certify
ಕನ್ನಡ ದುನಿಯಾ       Mobile App
       

Kannada Duniya

ಮಾ.1ರಿಂದ ಶುರುವಾಗ್ತಿದೆ ಐಡಿಯಾ VoLTE ಸೇವೆ

ದೇಶದ ಅತಿ ದೊಡ್ಡ ದೂರ ಸಂಪರ್ಕ ಕಂಪನಿಗಳಲ್ಲಿ ಒಂದಾದ ಐಡಿಯಾ VoLTE ಸೇವೆ ಶುರು ಮಾಡುವುದಾಗಿ ಘೋಷಣೆ ಮಾಡಿದೆ. ಐಡಿಯಾ VoLTE ಸೇವೆ ಮಾರ್ಚ್ 1 ರಿಂದ ಶುರುವಾಗಲಿದೆ. ಆರಂಭದಲ್ಲಿ ಕಂಪನಿ ತನ್ನ ಸಿಬ್ಬಂದಿಗೆ ಮಾತ್ರ ಈ ಸೌಲಭ್ಯ ನೀಡ್ತಿದೆ.

ಐಡಿಯಾ VoLTE ಸೇವೆ 4 ದೂರ ಸಂಪರ್ಕ ವ್ಯಾಪ್ತಿಯಲ್ಲಿ ದೇಶದ 30 ನಗರಗಳಲ್ಲಿ ಶುರುವಾಗಲಿದೆ. ಇದ್ರಲ್ಲಿ ಕೊಚ್ಚಿ, ತಿರುವನಂತಪುರಂ, ಕ್ಯಾಲಿಕಟ್, ಪುಣೆ, ಗೋವಾ, ನಾಸಿಕ್, ನಾಗ್ಪುರ, ಅಹಮದಾಬಾದ್, ಸೂರತ್, ರಾಜ್ಕೋಟ್ ಮತ್ತು ಹೈದರಾಬಾದ್ ಸೇರಿವೆ. ಏಪ್ರಿಲ್ ಒಳಗೆ ಎಲ್ಲ 20 ವರ್ತುಲ (4ಜಿ)ಗಳಲ್ಲಿ ಈ ಸೇವೆ ಶುರು ಮಾಡಲಿದೆ.

ಆರಂಭದಲ್ಲಿ ಸಿಬ್ಬಂದಿಗೆ ಮಾತ್ರ ಸೌಲಭ್ಯ ನೀಡುವುದಾಗಿ ಕಂಪನಿ ಸ್ಪಷ್ಟಪಡಿಸಿದೆ. 4ಜಿ VoLTE ಜೊತೆ 4ಜಿ ಸೇವೆ ಶುರು ಮಾಡಿ ಏರ್ಟೆಲ್, ವೋಡಾಫೋನ್ ಗೆ ಜಿಯೋ ಟಕ್ಕರ್ ನೀಡಿತ್ತು. ಜಿಯೋ ನಂತ್ರ ಉಳಿದ ಕಂಪನಿಗಳು ಈ ಸೇವೆಯನ್ನು ನಿಧಾನವಾಗಿ ಶುರು ಮಾಡ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...