alex Certify
ಕನ್ನಡ ದುನಿಯಾ       Mobile App
       

Kannada Duniya

ATM ಮೂಲಕವೇ ಪಡೆಯಬಹುದು 15 ಲಕ್ಷ ಸಾಲ

icicimint-kp4g-621x414livemint

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡಿದೆ. 15 ಲಕ್ಷ ರೂಪಾಯಿ ವರೆಗೂ ಎಟಿಎಂ ಮೂಲಕವೇ ಗ್ರಾಹಕರಿಗೆ ಇನ್ ಸ್ಟಂಟ್ ಸಾಲ ವಿತರಿಸಲಿದೆ. ಆಯ್ದ ಗ್ರಾಹಕರಿಗೆ ಮಾತ್ರ ಈ ಸಾಲ ಸೌಲಭ್ಯ ದೊರೆಯಲಿದೆ.

ಕಂಪನಿಯ ಕ್ರೆಡಿಟ್ ಮಾಹಿತಿಯ ಡೇಟಾ ಪರಿಶೀಲನೆ ಬಳಿಕ ಸಾಲ ಪಡೆಯಲು ಅರ್ಹ ಗ್ರಾಹಕರನ್ನು ಆಯ್ಕೆ ಮಾಡಲಾಗುತ್ತದೆ. ಎಟಿಎಂನಲ್ಲಿ ವಹಿವಾಟು ಪೂರ್ಣಗೊಳಿಸಿದ ಬಳಿಕ ಸಾಲ ದೊರೆಯುತ್ತದೋ ಇಲ್ಲವೋ ಎಂಬ ಬಗ್ಗೆ ಗ್ರಾಹಕರಿಗೆ ಮೆಸೇಜ್ ಕೂಡ ಬರುತ್ತದೆ.

5 ವರ್ಷಗಳ ಅವಧಿಗೆ ಗ್ರಾಹಕರು 15 ಲಕ್ಷ ರೂಪಾಯಿವರೆಗೂ ಸಾಲ ಪಡೆಯಬಹುದು. ಸಾಲದ ಮೊತ್ತ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಬಡ್ಡಿ ದರ, ಪ್ರೊಸೆಸಿಂಗ್ ಶುಲ್ಕ, ತಿಂಗಳ ಇನ್ ಸ್ಟಾಲ್ಮೆಂಟ್ ಎಲ್ಲದರ ಬಗ್ಗೆಯೂ ಗ್ರಾಹಕರಿಗೆ ಮೊದಲೇ ಮಾಹಿತಿ ನೀಡಲಾಗುತ್ತದೆ.

ಇದು ಸಂಪೂರ್ಣ ಕಾಗದ ರಹಿತ ಪ್ರಕ್ರಿಯೆ ಅನ್ನೋದು ವಿಶೇಷ. ಎಟಿಎಂ ಮೂಲಕವೇ ಸಾಲ ವಿತರಿಸಲಾಗುತ್ತದೆ. ಕಳೆದ ಕೆಲವರ್ಷಗಳಿಂದ ಕೆಟ್ಟ ಸಾಲದ ವ್ಯವಸ್ಥೆಯಿಂದ್ಲೇ ಬ್ಯಾಂಕ್ ಗೆ ಹಿನ್ನಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...