alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೆಡಿಟ್ ಕಾರ್ಡ್ ಬಳಸದವರಿಗೊಂದು ವಿಶೇಷ ಮಾಹಿತಿ

ಕ್ರೆಡಿಟ್ ಕಾರ್ಡ್ ಬಳಸದವರಿಗೊಂದು ವಿಶೇಷ ಮಾಹಿತಿಯಿದೆ. ಕ್ರೆಡಿಟ್ ಕಾರ್ಡ್ ಬಳಸದವರಿಗೆ ಹಣದ ಅವಶ್ಯಕತೆಯಿದೆ ಎಂದಾದ್ರೆ ಐಸಿಐಸಿಐ ಬ್ಯಾಂಕ್ ಸಾಲ ನೀಡ್ತಿದೆ.  ಬ್ಯಾಂಕ್ ನಲ್ಲಿ 30 ದಿನಗಳ ಸಾಲ ಪಡೆಯಬಹುದಾಗಿದೆ. ಅದೂ ಬಡ್ಡಿಯಿಲ್ಲದೆ ಸಾಲ ನೀಡುವ ಯೋಜನೆ ಶುರು ಮಾಡಿದೆ ಐಸಿಐಸಿಐ.

ಐಸಿಐಸಿಐ ವೆಬ್ಸೈಟ್ ನಲ್ಲಿ ನೀಡಿದ ಮಾಹಿತಿ ಪ್ರಕಾರ, ಪೇ ಲೇಟರ್ ಅಕೌಂಟ್ ಒಂದು ಡಿಜಿಟಲ್ ಕ್ರೆಡಿಟ್ ಪ್ರಾಜೆಕ್ಟ್ ಆಗಿದೆ. ಇದು ಕ್ರೆಡಿಟ್ ಕಾರ್ಡ್ ರೂಪದಲ್ಲಿಯೇ ಕೆಲಸ ಮಾಡಲಿದೆ. ಮೊದಲು ಖರ್ಚು ಮಾಡಿ ನಂತ್ರ ಹಣ ಸಂದಾಯ ಮಾಡುವ ವ್ಯವಸ್ಥೆ ಇದು.

ಐಸಿಐಸಿಐ ಬ್ಯಾಂಕ್ ಪೇ ಲೇಟರ್ ಮೂಲಕ ನೀವು ಬಡ್ಡಿ ರಹಿತ ಕ್ರೆಡಿಟ್ ಅಥವಾ ಸಾಲ ಪಡೆಯಬಹುದಾಗಿದೆ. ಈ ಕ್ರೆಡಿಟ್ ನಲ್ಲಿ ನೀವು ಬಿಲ್ ಪಾವತಿ ಮಾಡಬಹುದು. ವಸ್ತುಗಳ ಖರೀದಿ ಮಾಡಬಹುದು. ವ್ಯಾಪಾರಿಗಳಿಗೆ ಯುಪಿಐ ಐಡಿ ಮೂಲಕ ಪಾವತಿ ಮಾಡಬಹುದು.

ಆದ್ರೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಹಾಗೂ ಹಣ ವರ್ಗಾವಣೆಗೆ ಇದನ್ನು ಬಳಸಲು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಬಡ್ಡಿ ತುಂಬುವಂತಿಲ್ಲ. ಆದ್ರೆ ಅವಧಿ ಮುಗಿದ ಮೇಲೂ ಸಾಲ ಮರುಪಾವತಿ ಮಾಡಿಲ್ಲವೆಂದಾದ್ರೆ ವಿಳಂಬ ಶುಲ್ಕ ಪಾವತಿ ಮಾಡಬೇಕಾಗುತ್ತದೆ. 10 ಸಾವಿರದಿಂದ 25 ಸಾವಿರದವರೆಗೆ ಐಸಿಐಸಿಐ ಕ್ರೆಡಿಟ್ ನೀಡಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...