alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಹಿಳೆಯ ದಿನದ ಗಳಿಕೆ ಕೇಳಿದ್ರೇ ದಂಗಾಗ್ತೀರಿ

icici-dd

ನವದೆಹಲಿ: ಐ.ಸಿ.ಐ.ಸಿ.ಐ. ಬ್ಯಾಂಕ್ ಸಿ.ಇ.ಒ. ಚಂದಾ ಕೊಚ್ಚಾರ್ ಅವರ ವೇತನದಲ್ಲಿ ಶೇ. 64 ರಷ್ಟು ಏರಿಕೆಯಾಗಿದ್ದು, ದಿನಕ್ಕೆ ಬರೋಬ್ಬರಿ 2.18 ಲಕ್ಷ ರೂ. ಸಂಬಳ ಪಡೆಯುತ್ತಾರೆ.

2015 -16 ನೇ ಸಾಲಿನಲ್ಲಿ 4.79 ಕೋಟಿ ರೂ ಇದ್ದ ಅವರ ವೇತನದ ಪ್ಯಾಕೇಜ್ 2016 -17 ನೇ ಸಾಲಿನಲ್ಲಿ 7.85 ಕೋಟಿ ರೂ.ಗೆ ಏರಿಕೆಯಾಗಿದೆ.

2.67 ಕೋಟಿ ರೂ. ಮೂಲವೇತನ, 2.20 ಕೋಟಿ ರೂ. ಕಾರ್ಯಕ್ಷಮತೆ ಬೋನಸ್, 32 ಲಕ್ಷ ರೂ. ಭತ್ಯೆ, 22 ಲಕ್ಷ ರೂ ಗ್ರಾಚುಟಿ ಸೇರಿದಂತೆ ಒಟ್ಟು 7.85 ಕೋಟಿ ರೂ. ವೇತನವನ್ನು ಅವರು ಪಡೆಯಲಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ 13.75 ಲಕ್ಷ ರೂ. ಷೇರು ರೂಪದ ಕೊಡುಗೆಯೂ ಸಿಗಲಿದೆ.

ಹೆಚ್.ಡಿ.ಎಫ್.ಸಿ. ಬ್ಯಾಂಕ್ ನ ಆದಿತ್ಯ ಪುರಿ, ಆಕ್ಸಿಸ್ ಬ್ಯಾಂಕ್ ನ ಶಿಖಾ ಶರ್ಮಾ ಅವರನ್ನು ಹೊರತುಪಡಿಸಿ ಅತಿಹೆಚ್ಚು ವೇತನ ಪಡೆಯುತ್ತಿರುವ 3 ನೇ ಬ್ಯಾಂಕ್ ಮುಖ್ಯಸ್ಥರೆಂಬ ಹೆಗ್ಗಳಿಕೆ ಐ.ಸಿ.ಐ.ಸಿ.ಐ. ಬ್ಯಾಂಕ್ ಸಿ.ಇ.ಒ. ಚಂದಾ ಕೊಚ್ಚಾರ್ ಅವರದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...