alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬಕ್ಕೆ ಐಸಿಐಸಿಐ ಬ್ಯಾಂಕ್ ನೀಡ್ತಿದೆ ಭರ್ಜರಿ ಉಡುಗೊರೆ

ಹಬ್ಬದ ಋತುವಿನಲ್ಲಿ ಪ್ರತಿಯೊಂದು ಕಂಪನಿ ಗ್ರಾಹಕರಿಗೆ ಉಡುಗೊರೆ ನೀಡ್ತಿದೆ. ಇದೇ ರೀತಿ ಐಸಿಐಸಿಐ ಬ್ಯಾಂಕ್ ಕೂಡ ಗ್ರಾಹಕರಿಗೆ ಆಫರ್ ನೀಡ್ತಿದೆ. ಐಸಿಐಸಿಐ ಬ್ಯಾಂಕ್ ಆಫರ್ ಅಡಿಯಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ದಾರರಿಗೆ ಕ್ಯಾಶ್ ಬ್ಯಾಕ್ ಹಾಗೂ ರಿಯಾಯಿತಿ ಸಿಗ್ತಿದೆ.

ಪೀಟರ್ ಇಂಗ್ಲೆಂಡ್ ಮಳಿಗೆಯಲ್ಲಿ ಐಸಿಐಸಿಐ ಗ್ರಾಹಕರಿಗೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಸಿಗ್ತಿದೆ. ಪೀಟರ್ ಇಂಗ್ಲೆಂಡ್ ನಲ್ಲಿ ಖರೀದಿ ಮಾಡಿ ಐಸಿಐಸಿಐ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದವರಿಗೆ ಮಾತ್ರ ಇದ್ರ ಲಾಭ ಸಿಗಲಿದೆ. ಈ ಆಫರ್ ಪಡೆಯಲು ಗ್ರಾಹಕರು ಕನಿಷ್ಠವೆಂದ್ರೂ 3500 ರೂಪಾಯಿ ಮೌಲ್ಯದ ಖರೀದಿ ಮಾಡಬೇಕು.

ಪೀಟರ್ ಇಂಗ್ಲೆಂಡ್ 750 ರೂಪಾಯಿ ಕ್ಯಾಶ್ ಬ್ಯಾಕ್ ನೀಡಲಿದೆ. ಇದಲ್ಲದೆ ಟ್ರೆಂಡ್ ಸ್ಟೋರ್ ನಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ. ಇನ್ನು ರೇಮಂಡ್ ಗ್ರೂಪ್ ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೇಲೆ ಶೇಕಡಾ 5ರಷ್ಟು ಕ್ಯಾಶ್ ಬ್ಯಾಕ್ ನೀಡ್ತಿದೆ. 5 ಸಾವಿರ ರೂಪಾಯಿಗಿಂತ ಹೆಚ್ಚು ಖರೀದಿ ಮಾಡಿದ ಗ್ರಾಹಕರು ಇದ್ರ ಲಾಭ ಪಡೆಯಲಿದ್ದಾರೆ.

ಐಸಿಐಸಿಐ, ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ‘Amazon Pay ICICI Bank Credit Card’ ನಲ್ಲಿ ಖರೀದಿ ಮಾಡಿದ್ರೆ ಗ್ರಾಹಕರಿಗೆ ಶೇಕಡಾ 5ರಷ್ಟು ಸಂಭಾವನೆ ಅಂಕಗಳು ಸಿಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...