alex Certify
ಕನ್ನಡ ದುನಿಯಾ       Mobile App
       

Kannada Duniya

ಪರ್ಸನಾಲಿಟಿಗೆ ತಕ್ಕಂತೆ ಬಣ್ಣ ಬದಲಿಸುತ್ತೆ ಸೀರೆ

ಕೃತಕ ಬುದ್ದಿಮತ್ತೆ ನಿಧಾನವಾಗಿ ನಮ್ಮ ಜೀವನದ ವಿವಿಧ ಭಾಗಗಳಲ್ಲಿ ಪ್ರವೇಶ ಮಾಡ್ತಿದೆ. ಐಟಿ ಕಂಪನಿ ಐಬಿಎಂನ ವ್ಯಾಟ್ಸನ್ ಹಾಗೂ ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಕೃತಕ ಬುದ್ದಿಮತ್ತೆಯ ಎನ್ಸ್ಪೈರ್ಡ್ ಸೀರೆಯನ್ನು ತಯಾರಿಸಿದ್ದಾರೆ. ಈ ಸೀರೆಯನ್ನು ವೊಗ್ ವುಮೆನ್ ಆಫ್ ದಿ ಇಯರ್ 2017 ರ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ.

ಐಬಿಎಂ ಐಒಟಿ ಈ ಸೀರೆಯಲ್ಲಿ ಎಲ್ ಇ ಡಿ ಲೈಟ್ ಅಳವಡಿಸಲಾಗಿದೆ. ಸೀರೆಗೆ ಅಳವಡಿಸಿರುವ ಈ ಎಲ್ ಇ ಡಿ ಲೈಟ್ಸ್ ಜನರ ಪರ್ಸನಾಲಿಟಿಗೆ ತಕ್ಕಂತೆ ಬಣ್ಣ ಬದಲಿಸುತ್ತದೆ. ಗೌರವ್ ಗುಪ್ತಾ ಈ ಸೀರೆಗೆ ಕಸ್ಟಮ್ ಬಿಲ್ಟ್ ಐಬಿಎಂ ಅಪ್ಲಿಕೇಶನ್ ಅಳವಡಿಸಿದ್ದಾರೆ.

ಐಬಿಎಂ ಈ ಮಹತ್ವಕಾಂಕ್ಷಿ ಹಾಗೂ ಅತ್ಯಾಕರ್ಷಕ ಯೋಜನೆಯೊಂದಿಗೆ ನನ್ನನ್ನು ಸಂಪರ್ಕಿಸಿದಾಗ ನನಗೆ ಖುಷಿಯಾಯ್ತು. ಈ ಯೋಜನೆ ನನಗಾಗಿಯೇ ಮಾಡಿದ್ದು ಎಂದುಕೊಂಡೆ ಎಂದು ಗೌರವ್ ಗುಪ್ತಾ ಹೇಳಿದ್ದಾರೆ. ಐಬಿಎಂ ವ್ಯಾಟ್ಸನ್ ಎಲ್ ಇ ಡಿ ಎಂಬೆಡೆಡ್ ಸ್ಯಾರಿ ತಯಾರಿಸಲು ಪರ್ಸನಾಲಿಟಿ ಇನ್ಸೈಟ್ ಎಪಿಐ ಮತ್ತು ಸ್ಮಾರ್ಟ್ ಐಓಒಟಿ ಯನ್ನು ಬಳಸಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...