alex Certify
ಕನ್ನಡ ದುನಿಯಾ       Mobile App
       

Kannada Duniya

ಐ.ಟಿ. ರಿಟರ್ನ್ಸ್ ಸಲ್ಲಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್

ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರೂ ಸಾಲು ಸಾಲು ರಜೆಯ ಕಾರಣದಿಂದ ಸಾಧ್ಯವಾಗುತ್ತಿಲ್ಲ ಎಂದು ಭಾವಿಸಿದ್ದವರಿಗೆ ಗುಡ್ ನ್ಯೂಸ್ ಇಲ್ಲಿದೆ.

ಹಣಕಾಸು ವರ್ಷದ ಅಂತಿಮ ದಿನಗಳಲ್ಲಿ ಸಾಲು ಸಾಲು ರಜೆ ಬಂದಿದೆ. ಆದರೆ, ರಜೆ ದಿನಗಳಾಗಿದ್ದರೂ ಐ.ಟಿ. ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಮಾರ್ಚ್ 29 ರಂದು ಮಹಾವೀರ ಜಯಂತಿ, ಮಾರ್ಚ್ 30 ಗುಡ್ ಫ್ರೈಡೇ ಸರ್ಕಾರಿ ರಜೆ ದಿನವಾಗಿದೆ. ಮಾರ್ಚ್ 31 ಶನಿವಾರ ಹಣಕಾಸು ವರ್ಷದ ಕೊನೆ ದಿನವಾಗಿದ್ದು, ಮರುದಿನ ಭಾನುವಾರ ರಜೆ ಇದೆ.

ಆದರೆ, ಆದಾಯ ಲೆಕ್ಕಪತ್ರ ಸಲ್ಲಿಕೆ ಮಾಡುವವರಿಗೆ ಯಾವುದೇ ತೊಂದರೆಯಾಗದಂತೆ ಆದಾಯ ತೆರಿಗೆ ಇಲಾಖೆ ಕಚೇರಿಗಳು ಮತ್ತು ಸೇವಾ ಕೇಂದ್ರಗಳು ಮಾರ್ಚ್ 29, 30 ಮತ್ತು 31 ರಂದು ಕಾರ್ಯನಿರ್ವಹಿಸಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...