alex Certify
ಕನ್ನಡ ದುನಿಯಾ       Mobile App
       

Kannada Duniya

ಝಾರಾ ಉಡುಪುಗಳ ಮೇಲಿನ ಟ್ಯಾಗ್ ನಲ್ಲಿತ್ತು ನೌಕರರ ಅಳಲು

ಇಸ್ತಾಂಬುಲ್ ನಲ್ಲಿ ಪ್ರಸಿದ್ಧ ಝಾರಾ ಕಂಪನಿಯ ಉಡುಪುಗಳ ಮೇಲೆ ವಿಚಿತ್ರವಾದ ಟ್ಯಾಗ್ ಒಂದು ಪತ್ತೆಯಾಗಿದೆ. ಉಡುಪುಗಳ ತಯಾರಿಕೆಯನ್ನು ಝಾರಾ ಬೇರೊಂದು ಕಂಪನಿಗೆ ಹೊರಗುತ್ತಿಗೆ ನೀಡಿದೆ. ಟರ್ಕಿ ಮೂಲದ ಆ ಕಂಪನಿಯ ನೌಕರರಿಗೆ ವೇತನವನ್ನೇ ನೀಡಿಲ್ಲವಂತೆ.

ಹಾಗಾಗಿ ಅವರು ಝಾರಾ ಮಳಿಗೆಗೆ ಭೇಟಿ ಕೊಟ್ಟು, ತಮಗೆ ವೇತನ ನೀಡದ ವಿಷಯವನ್ನು ಬರೆದು ಆ ಟ್ಯಾಗನ್ನು ಅಲ್ಲಿರುವ ಉಡುಪುಗಳಲ್ಲಿ ಹಾಕಿ ಬರ್ತಿದ್ದಾರೆ. ನೀವು ಖರೀದಿಸುತ್ತಿರುವ ಈ ಉಡುಪನ್ನು ನಾನು ತಯಾರಿಸಿದ್ದೇನೆ. ಆದ್ರೆ ಅದಕ್ಕಾಗಿ ನನಗೆ ಸಂಬಳವನ್ನೇ ನೀಡಿಲ್ಲ ಅಂತಾ ಟ್ಯಾಗ್ ನಲ್ಲಿ ಬರೆಯಲಾಗಿದೆ.

ಬ್ರಾವೋ ಎಂಬ ಕಂಪನಿ ಈ ನೌಕರರನ್ನು ನೇಮಕ ಮಾಡಿಕೊಂಡಿತ್ತು. ಆದ್ರೆ ನಷ್ಟದ ಹಿನ್ನೆಲೆಯಲ್ಲಿ ದಿಢೀರನೆ ಸಂಸ್ಥೆಯನ್ನು ಮುಚ್ಚಲಾಗಿದೆ. ನೌಕರರಿಗೆ ಮೂರು ತಿಂಗಳ ವೇತನ ಹಾಗೂ ಇತರ ಭತ್ಯೆಗಳನ್ನೂ ಕಂಪನಿ ನೀಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...