alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ ಸ್ಯಾಂಟ್ರೋ ಬುಕಿಂಗ್

ಭಾರತದ ಎರಡನೇ ಅತಿ ದೊಡ್ಡ ಕಾರು ತಯಾರಕ ಕಂಪೆನಿ ಹುಂಡೈ, ತನ್ನ ಪ್ರಮುಖ ಪ್ರಾಡಕ್ಟ್ ಆದ ಸ್ಯಾಂಟ್ರೋ ಬುಕಿಂಗ್ ಅವಧಿಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ. ಅತಿಯಾದ ಬೇಡಿಕೆ ಈ ಚಿಂತನೆಗೆ ಕಾರಣ ಎನ್ನಲಾಗಿದೆ.

ಒಂದು ವೇಳೆ ಹೊಸ ಕಾರು ಬೇಕಿದ್ದರೆ ಬುಕಿಂಗ್ ಮಾಡಿದ ಮೂರು ತಿಂಗಳ ಬಳಿಕವಷ್ಟೆ ಗ್ರಾಹಕರಿಗೆ ಲಭ್ಯವಾಗಲಿದೆ. ಅಕ್ಟೋಬರ್ 10ರಂದು ಹೊಸ ವಿನ್ಯಾಸದ ಕಾರು ಮಾರುಕಟ್ಟೆಗೆ ಲಾಂಚ್ ಆದ ಬಳಿಕ 32 ಸಾವಿರ ಯೂನಿಟ್ ಬುಕ್ ಆಗಿದೆ. ಬೇಡಿಕೆ ಹೆಚ್ಚಿದಂತೆ ಉತ್ಪಾದನೆ ಹೆಚ್ಚಿಸಲು ಕಂಪೆನಿ ನಿರ್ಧರಿಸಿದೆ. ಆದರೆ ಚನ್ನೈನ ಉತ್ಪಾದನಾ ಘಟಕದ ಸಾಮರ್ಥ್ಯ ಹೆಚ್ಚಿಸಲು ಅವಕಾಶವಿಲ್ಲ.

ಸ್ಯಾಂಟ್ರೋ ಉತ್ಪಾದನೆ ಆರಂಭಿಸುವ ಮುನ್ನ ಪ್ರತಿ ತಿಂಗಳು 8-10 ಸಾವಿರ ಮಾರಾಟವಾಗಬಹುದೆಂಬ ಅಂದಾಜಿದ್ದು, ಈಗಿನ ಟ್ರೆಂಡ್ ಗಮನಿಸಿದರೆ ನಿರೀಕ್ಷೆಗೆ ಮೀರಿ ಬೇಡಿಕೆ ಸೃಷ್ಟಿಯಾಗಬಹುದೆಂಬ ಅಂದಾಜಿದೆ.

ಈ ಅತಿಯಾದ ಬೇಡಿಕೆಯನ್ನು ಗಮನಿಸಿ ಬುಕಿಂಗ್ ಅನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಚಿಂತನೆ ಇದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ. ಸ್ಯಾಂಟ್ರೋ ಮಾರುಕಟ್ಟೆಗಾಗಿಯೇ ಹುಂಡೈ ತನ್ನ ಇಯಾನ್ ಉತ್ಪಾದನೆಯನ್ನು ನಿಲ್ಲಿಸಬೇಕಾಯಿತು. ಹುಂಡೈನ ಎಂಟ್ರಿ ಲೆವೆಲ್ ಕಾರ್ ಎನಿಸಿಕೊಂಡ ಇಯಾನ್ ಸರಾಸರಿ 4200 ಯೂನಿಟ್ ಮಾರಾಟವಾಗುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...