alex Certify
ಕನ್ನಡ ದುನಿಯಾ       Mobile App
       

Kannada Duniya

2017 ರಲ್ಲಿ ಭಾರತ ಕಂಡ ಅತಿ ಶ್ರೀಮಂತರಿವರು….

ಭಾರತದಲ್ಲಿ ಶ್ರೀಮಂತರಿಗೇನೂ ಕಮ್ಮಿಯಿಲ್ಲ. 2017 ರಲ್ಲಿ ದೇಶದ ಅತಿ ಶ್ರೀಮಂತ ಎನಿಸಿಕೊಂಡವರು ಉದ್ಯಮಿ ಮುಖೇಶ್ ಅಂಬಾನಿ. ಯೋಗ ತಜ್ಞ ಹಾಗೂ ಪತಂಜಲಿ ಕಂಪನಿಯ ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ, ಡಿ-ಮಾರ್ಟ್ ನ ರಾಧಾಕೃಷ್ಣನ್ ದಮನಿ ಕೂಡ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ವರ್ಷ ರಿಯಲೆನ್ಸ್ ಕಂಪನಿ ಒಡೆಯ ಮುಖೇಶ್ ಅಂಬಾನಿ ಅವರ ಆಸ್ತಿಯಲ್ಲಿ ಶೇ.58 ರಷ್ಟು ಹೆಚ್ಚಳವಾಗಿದೆ. ಸತತ 6 ನೇ ವರ್ಷ ಭಾರತದ ಅತ್ಯಂತ ಶ್ರೀಮಂತನ ಪಟ್ಟವನ್ನು ಅವರು ಉಳಿಸಿಕೊಂಡಿದ್ದಾರೆ. ವಿಶ್ವದ ಅತಿ ಶ್ರೀಮಂತರ ಪೈಕಿ ಮುಖೇಶ್ ಅಂಬಾನಿಗೆ 15ನೇ ಸ್ಥಾನ ಲಭಿಸಿದೆ. ಅವರ ಆಸ್ತಿ ಯೆಮನ್ ದೇಶದ ಜಿಡಿಪಿಗಿಂತ ಶೇ.50 ರಷ್ಟು ಹೆಚ್ಚಾಗಿದೆ.

ಪತಂಜಲಿಯ ಬಾಲಕೃಷ್ಣ ದೇಶದ ಅತಿ ಶ್ರೀಮಂತರಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಅವರಿಗೆ 25ನೇ ಸ್ಥಾನ ಲಭಿಸಿತ್ತು. ಅವರ ಆಸ್ತಿ ಶೇ.173ರಷ್ಟು ಹೆಚ್ಚಳವಾಗಿದ್ದು, 70,000 ಕೋಟಿಗೆ ತಲುಪಿದೆ. ಈ ವರ್ಷ ಪತಂಜಲಿ ಸಂಸ್ಥೆಯ ವಹಿವಾಟು ಬರೋಬ್ಬರಿ 10,561 ಕೋಟಿ ರೂಪಾಯಿ.

ಅವೆನ್ಯೂ ಸೂಪರ್ ಮಾರ್ಟ್ ಅಧ್ಯಕ್ಷ ದಮನಿ, ಎಂಡ್ಯೂರೆನ್ಸ್ ಟೆಕ್ ನ ಅನುರಾಗ್ ಜೈನ್ ಕೂಡ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮೀಡಿಯಾ ಡಾಟ್ ನೆಟ್ ನ ದಿವ್ಯಾಂಕ್ ತುರಾಕಿಯಾ ಕೂಡ ಈಗ ಬಿಲಿಯನೇರ್. ಬೆಂಗಳೂರು ಮೂಲದ ಅಂಬಿಗಾ ಸುಬ್ರಮಣಿಯನ್ ಕೂಡ ಭಾರತದ ಅತಿ ಸಿರಿವಂತರಲ್ಲಿ ಒಬ್ಬರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...