alex Certify
ಕನ್ನಡ ದುನಿಯಾ       Mobile App
       

Kannada Duniya

ದಕ್ಷಿಣ ಭಾರತ ಮಹಿಳೆಯರ ಕೂದಲಿಗೆ ಬೇಡಿಕೆ ಏಕೆ ಗೊತ್ತಾ?

23_09_2016-23humanhairs

ಉದುರಿದ ತಲೆ ಕೂದಲನ್ನು ಕಸದ ಬುಟ್ಟಿಗೆ ಹಾಕ್ತಿದ್ದ ಮಹಿಳೆಯರು ಈಗ ಬದಲಾಗಿದ್ದಾರೆ. ಉದುರಿದ ಕೂದಲಿಗೆ ಬೆಲೆ ಬಂದಿದೆ ಎಂಬ ವಿಷಯ ನಿಧಾನವಾಗಿ ಅವರ ಅರಿವಿಗೆ ಬರ್ತಿದೆ. ಹಾಗಾಗೇ ಉದುರಿದ ಕೂದಲನ್ನು ಸಂಗ್ರಹಿಸಿ ಮಾರಾಟ ಮಾಡ್ತಿದ್ದಾರೆ. ಬೀದಿಯಲ್ಲಿ ನೂರು ಗ್ರಾಂ ಕೂದಲಿಗೆ ಇಷ್ಟು, 500 ಗ್ರಾಂ ಕೂದಲಿಗೆ ಇಷ್ಟು ಹಣ ಅಂತಾ ಕೂಗಿಕೊಂಡು ಹೋಗೋರನ್ನು ನೀವು ನೋಡಿರ್ತೀರಾ. ಆದ್ರೆ ಈ ಕೂದಲು ಉದ್ಯಮದ ಬಗ್ಗೆ ನಿಮಗೆ ಗೊತ್ತಾ?

ಕೂದಲೋದ್ಯಮ ವೇಗವಾಗಿ ಬೆಳೆಯುತ್ತಿದೆ. ಸುಮಾರು 2,500 ಕೋಟಿ ರೂ. ವಹಿವಾಟು ನಡೆಸ್ತಿದೆ. ಗುಣಮಟ್ಟದ ಕೂದಲಿಗೆ ಭಾರೀ ಬೇಡಿಕೆ ಇದೆ. ಹಾಗೆ ಅದ್ರ ಬೆಲೆ ಕೂಡ ಜಾಸ್ತಿ. ಯಾವುದೇ ಬಣ್ಣ ಹಾಕದ, ಚಿಕಿತ್ಸೆ ಇಲ್ಲದ ಕೂದಲನ್ನು ಗುಣಮಟ್ಟದ ಕೂದಲು ಎಂದು ಪರಿಗಣಿಸಲಾಗುತ್ತದೆ. ಅಮೆರಿಕಾ, ಚೀನಾ, ಬ್ರಿಟನ್ ಸೇರಿದಂತೆ ವಿದೇಶಗಳಲ್ಲಿ ಭಾರತದ ಕೂದಲಿಗೆ ಭಾರೀ ಬೇಡಿಕೆ ಇದೆ.

ಆಂಧ್ರಪ್ರದೇಶ ಹಾಗೂ ತಮಿಳುನಾಡು ದೇವಸ್ಥಾನಗಳಲ್ಲಿ ಹರಕೆ ಕೊಟ್ಟ ಭಕ್ತರ ಕೂದಲುಗಳನ್ನು ಮಾರಾಟ ಮಾಡಲಾಗುತ್ತದೆ. ಉತ್ತರ ಭಾರತ ಹಾಗೂ ನಗರ ಪ್ರದೇಶಗಳಲ್ಲಿ ಗುಣಮಟ್ಟದ ಕೂದಲು ಸಿಗೋದು ಕಷ್ಟ. ಮಹಿಳೆಯರು ಫ್ಯಾಷನ್ ಗೀಳಿಗೆ ಬಿದ್ದಿರುವುದರಿಂದ ಕೂದಲಿಗೆ ಕಲರ್ ಮಾಡಿಸಿಕೊಳ್ತಿದ್ದಾರೆ. ಆದ್ರೆ ದಕ್ಷಿಣ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಕೂದಲಿಗೆ ಬಣ್ಣ ಹಚ್ಚುವುದಿಲ್ಲ. ಜೊತೆಗೆ ಯಾವುದೇ ಚಿಕಿತ್ಸೆ ಪಡೆಯುವುದಿಲ್ಲ. ಹಾಗಾಗಿ ಆ ಕೂದಲಿಗೆ ಬೇಡಿಕೆ ಜಾಸ್ತಿ ಇದೆ. ಇನ್ಮುಂದೆ ಸೆಲೂನ್ ಗೆ ಹೋಗಿ ಕೂದಲು ಕಟ್ ಮಾಡಿಸುವ ಮೊದಲು ಅದ್ರ ಬೆಲೆ ಬಗ್ಗೆ ಒಮ್ಮೆ ಯೋಚನೆ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...