alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರ ಬಿಡುಗಡೆಯಾಗಲಿದೆ ಮೂರು ರಿಯರ್ ಕ್ಯಾಮರಾವುಳ್ಳ ಸ್ಮಾರ್ಟ್ಫೋನ್

ಚೀನಾ ಟೆಕ್ನಾಲಜಿ ಕಂಪನಿ Huawei ಮೂರು ರಿಯರ್ ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ ಒಂದನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಇದು Huawei ಕಂಪನಿಯ ಪ್ರಮುಖ ಸ್ಮಾರ್ಟ್ಫೋನ್ ಆಗಲಿದೆ. ಹೊಸ ಸ್ಮಾರ್ಟ್ಫೊನ್ ಪಿ10 ಸ್ಮಾರ್ಟ್ಫೋನ್ ರಿಪ್ಲೇಸ್ ಮಾಡಲಿದೆಯಂತೆ.

ಮುಂದಿನ ತಿಂಗಳು Huawei ಪಿ20 ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಫೋನ್ ನ ಚಿತ್ರಗಳು ಸೋರಿಕೆಯಾಗಿವೆ. ಚೀನಾದ ಸ್ಮಾರ್ಟ್ಫೋನ್ ಕವರ್ ಕಂಪನಿಗಳು Huawei ಪಿ20ಗಾಗಿ ಕವರ್ ಸಿದ್ಧಪಡಿಸಿದೆ. ಈ ಕವರ್ ನೋಡಿಯೇ Huawei ಪಿ 20 ಸ್ಮಾರ್ಟ್ಫೋನ್ ಹೇಗಿರಬಹುದೆಂದು ಅಂದಾಜಿಸಲಾಗ್ತಿದೆ.

ಐಫೋನ್ ಎಕ್ಸ್ ಗೆ ಇದು ಹೋಲಲಿದ್ದು ಮೂರು ರಿಯರ್ ಕ್ಯಾಮರಾ ಇರಲಿದೆ. Huawei ಮಾಧ್ಯಮಗಳಿಗೆ ಆಮಂತ್ರಣ ಪತ್ರ ಕಳುಹಿಸಲು ಶುರು ಮಾಡಿದೆ. ಮಾರ್ಚ್ 27ರಂದು Huawei ಪಿ20 ಬಿಡುಗಡೆಯಾಗಲಿದೆ. ಈ ವೇಳೆ ಕಂಪನಿ ಮೂರು ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಸಾಧ್ಯತೆಯಿದೆ. Huawei P20, Huawei P20 Lite ಮತ್ತು Huawei P20 Plus ಬಿಡುಗಡೆಯಾಗಲಿದೆ ಎಂದು ಮೂಲಗಳು ಹೇಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...