alex Certify
ಕನ್ನಡ ದುನಿಯಾ       Mobile App
       

Kannada Duniya

ಆಪಲ್ ಅಣಕಿಸಲು ಜ್ಯೂಸ್ ವಿತರಿಸಿದ ಹುವಾಯಿ

ಆಪಲ್ ಉತ್ಪನ್ನಗಳ ಮಳಿಗೆ ಮುಂದೆ ಸರತಿಗಟ್ಟಿ ನಿಂತಿದ್ದ ನೂರಾರು ಮಂದಿಗೆ ಎದುರಾಳಿ ಕಂಪೆನಿ ಹುವಾಯಿ ಕಡೆಯಿಂದ ಅಣಕಿಸುವ ರೀತಿಯಲ್ಲಿ ಪವರ್ ಬ್ಯಾಂಕ್ ಮತ್ತು ಆಪಲ್ ರಹಿತ ಜ್ಯೂಸ್ ಸೇವೆ ಕಲ್ಪಿಸಿದ ವಿಚಿತ್ರ ಬೆಳವಣಿಗೆಯೊದು ಲಂಡನ್, ಸಿಂಗಾಪುರ ಮತ್ತಿತರ ಕಡೆ ನಡೆದಿದೆ.

ಅಂದಹಾಗೆ ಅವರೆಲ್ಲ ಕ್ಯೂ ನಿಂತಿದ್ದೇಕೆ ಅಂದುಕೊಂಡಿರಾ? ಆಪಲ್ ಕಂಪೆನಿ ಐ ಪೋನ್ ಎಕ್ಸ್ ಎಸ್, ಐ ಫೋನ್ ಎಕ್ಸ್ ಮ್ಯಾಕ್ಸ್ ಮತ್ತು ಆಪಲ್ ವಾಚ್ ಸೀರೀಸ್-4 ಮಾರುಕಟ್ಟಿಗೆ ಬಿಡುಗಡೆಯಾಗುತ್ತಿದ್ದಂತೆ ಅದನ್ನು ಕೊಳ್ಳಲು ಜನತೆ ದೇಶದ ವಿವಿಧೆಡೆ ಆಪಲ್ ಮಳಿಗೆ ಮುಂದೆ ಗಂಟೆಗಟ್ಟಲೆ, ಕೆಲವೆಡೆ ರಾತ್ರಿ ಇಡೀ ಕಾದಿದ್ದರು.

ಈ ಸಂದರ್ಭವನ್ನು ಉಪಯೋಗಿಸಿಕೊಂಡ ಹುವಾಯಿ ಕಂಪೆನಿ ಲಂಡನ್ನಲ್ಲಿ ಕ್ಯೂ ನಿಂತವರಿಗೆ ಆಪಲ್ ರಹಿತ ಜ್ಯೂಸ್ ವಿತರಿಸಿತು. ಸಿಂಗಾಪುರದಲ್ಲಿ ಪವರ್ ಬ್ಯಾಂಕ್ ಸೇವೆ ನೀಡಿತು. ಮುಖ್ಯವಾಗಿ, ಪವರ್ ಬ್ಯಾಂಕ್ ಮೇಲೆ ನಿಮಗೆ ಇದರ ಅಗತ್ಯವಿದೆ, ಕರ್ಟಸಿ ಹುವಾಯಿ ಕಡೆಯಿಂದ ಎಂಬ ಟ್ಯಾಗ್ ಲೈನ್ ಕೂಡ ಇತ್ತು! ಈ ಮೂಲಕ ಚಮತ್ಕಾರಿ ಮಾರ್ಕೆಟಿಂಗ್ ಮಾಡುವ ಚೀನಿ ಕಂಪೆನಿಯ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...