alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ಬಳಕೆದಾರರಿಗೆ ಇಲ್ಲಿದೆ ಒಂದು ಸಕತ್ ಸುದ್ದಿ

ಟೆಲಿಕಾಂ ಕ್ಷೇತ್ರಕ್ಕೆ ರಿಲಯನ್ಸ್ ಜಿಯೋ ಎಂಟ್ರಿಯಾದ ಬಳಿಕ ಕಂಪನಿಗಳ ಮಧ್ಯೆ ಭಾರೀ ಸ್ಪರ್ಧೆ ಏರ್ಪಟಿದ್ದು, ಇದರ ಲಾಭ ಮೊಬೈಲ್ ಬಳಕೆದಾರರಿಗಾಗುತ್ತಿದೆ. ಇಂಟರ್ನೆಟ್ ಬಳಕೆ ಈಗ ವ್ಯಾಪಕವಾಗಿದ್ದು, ಅತ್ಯಂತ ಕಡಿಮೆ ದರದಲ್ಲಿ ಲಭ್ಯವಾಗುತ್ತಿರುವ ಕಾರಣ ಸ್ಮಾರ್ಟ್ ಫೋನ್ ಖರೀದಿಯೂ ಜೋರಾಗಿದೆ.

ಈ ಮಧ್ಯೆ ಕಂಪನಿಗಳು ಹೇಳಿದಷ್ಟೂ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ನೀಡುತಿಲ್ಲವೆಂಬ ಅಸಮಾಧಾನ ಬಳಕೆದಾರರಲ್ಲಿತ್ತು. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಬಹಿರಂಗಗೊಂಡ ಮಾಹಿತಿಯೊಂದು ಭಾರತದ ಸರಾಸರಿ 4ಜಿ ಸ್ಪೀಡ್, ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಹೇಳಿತ್ತು. ಪಾಕಿಸ್ತಾನ, ಅಲ್ಜೀರಿಯಾ, ಕಜಕಿಸ್ತಾನ, ಟ್ಯುನಿಶಿಯಾದಂತಹ ರಾಷ್ಟ್ರಗಳಲ್ಲಿ 4ಜಿ ಇಂಟರ್ನೆಟ್ ಸ್ಪೀಡ್ ಭಾರತಕ್ಕಿಂತ್ಲೂ ಅಧಿಕವಾಗಿದೆ ಎಂಬ ಮಾಹಿತಿಯೂ ಹೊರ ಬಿದ್ದಿತ್ತು.

ಈ ಮಧ್ಯೆ ಭಾರತದ ಇಂಟರ್ನೆಟ್ ಬಳಕೆದಾರರಿಗೆ ಖುಷಿ ಸುದ್ದಿಯೊಂದು ಹೊರ ಬಿದ್ದಿದೆ. huawei ಜೊತೆ ಒಪ್ಪಂದ ಮಾಡಿಕೊಂಡಿರುವ ಭಾರ್ತಿ ಏರ್ಟೆಲ್ ಶುಕ್ರವಾರದಂದು ಗುರುಗ್ರಾಮದ ಮನೇಸರದಲ್ಲಿ 5ಜಿ ಇಂಟರ್ನೆಟ್ ಸೇವೆ ಸಂಬಂಧ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದ್ದು, ಅದರಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ. 5ಜಿ ಸೇವೆಯನ್ನು ನೀಡಲು ಸಜ್ಜಾಗಿರುವ ಏರ್ಟೆಲ್ ಇದನ್ನು ಜಾರಿಗೊಳಿಸಿದರೆ ಅತಿ ವೇಗದ ಇಂಟರ್ನೆಟ್ ಸೌಲಭ್ಯ ಬಳಕೆದಾರರಿಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...