alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಪರ್ ಬ್ಯಾಗ್ ಉದ್ಯಮಕ್ಕೆ ಧುಮುಕಿ ಕೈ ತುಂಬಾ ಸಂಪಾದಿಸಿ

ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣ ಪಾಲಿಥಿನ್. ಇತ್ತೀಚಿಗೆ ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಾಲಿಥಿನ್ ರದ್ದು ಮಾಡಲಾಗಿದೆ. ಇದ್ರಿಂದಾಗಿ ಕಾಗದದ ಚೀಲಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಪೇಪರ್ ಬ್ಯಾಗ್ ಪರಿಸರ ಸುರಕ್ಷಿತ. ಹೊಸ ವ್ಯಾಪಾರ ಶುರುಮಾಡಲು ಬಯಸುವವರು ಪೇಪರ್ ಬ್ಯಾಗ್ ತಯಾರಿಕೆ ಶುರು ಮಾಡಬಹುದು. ಹೆಚ್ಚು ಲಾಭ ಗಳಿಸುವ ಉದ್ಯೋಗಗಳಲ್ಲಿ ಇದೂ ಒಂದು.

ಪೇಪರ್ ಬ್ಯಾಗ್ ತಯಾರಿಕಾ ಘಟಕ ಶುರು ಮಾಡಲು ಬಯಸಿದ್ದರೆ ನಿಮಗೆ ಸರ್ಕಾರ 1 ಕೋಟಿಯವರೆಗೆ ಸಾಲ ನೀಡುತ್ತದೆ. ಉದ್ಯಮಿ ಮಿತ್ರ ಸರ್ಕಾರಿ ಯೋಜನೆಯಡಿ ನಿಮಗೆ ಸಾಲ ಸಿಗಲಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್ ಮುಂಬೈ ಸೇರಿದಂತೆ ಅದ್ರ ಶಾಖೆಗಳಲ್ಲಿ ಪೇಪರ್ ಬ್ಯಾಗ್ ತಯಾರಿಸುವ ಬಗ್ಗೆ ತರಬೇತಿ ನೀಡುತ್ತದೆ.

www.udyamimitra.in  ನಲ್ಲಿ ನಿಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಯಂತ್ರಕ್ಕೆ 14.65 ಲಕ್ಷ ರೂಪಾಯಿ, ಸ್ಥಳ, ಕಚ್ಚಾ ವಸ್ತು ಸೇರಿದಂತೆ ಒಟ್ಟೂ 91.64 ಲಕ್ಷ ರೂಪಾಯಿ ಖರ್ಚು ಬರಲಿದೆ. ಎಲ್ಲ ಖರ್ಚು ಸೇರಿಸಿ 1 ಕೋಟಿ 48 ಲಕ್ಷ ರೂಪಾಯಿ ಪ್ರಾಜೆಕ್ಟ್ ವರದಿ ತಯಾರಿಸಿದ್ರೆ 1 ಕೋಟಿ ಸಾಲ ಸಿಗಲಿದೆ. ಒಮ್ಮೆ ಈ ಉದ್ಯಮಕ್ಕಿಳಿದ್ರೆ ನಿರಂತರ ಲಾಭ ಪಡೆಯಬಹುದು. ಈಗ ಮಾಲ್ ಸೇರಿದಂತೆ ಸಣ್ಣ ಸಣ್ಣ ಅಂಗಡಿಗಳಲ್ಲೂ ಪೇಪರ್ ಬ್ಯಾಗ್ ಬಳಸುತ್ತಿರುವುದ್ರಿಂದ ಹೆಚ್ಚೆಚ್ಚು ಲಾಭ ಪಡೆಯಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...