alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಫೋಟೋವನ್ನು ವಾಟ್ಸಾಪ್ ಸ್ಟಿಕ್ಕರ್ ಮಾಡೋದು ಹೇಗೆ ಗೊತ್ತಾ?

ವಾಟ್ಸಾಪ್ ಇತ್ತೀಚಿಗಷ್ಟೆ ಸ್ಟಿಕ್ಕರ್ ಫೀಚರ್ ಪರಿಚಯಿಸಿದೆ. ಎಲ್ಲ ಬಳಕೆದಾರರಿಗೂ ಈ ಸ್ಟಿಕ್ಕರ್ ಸೌಲಭ್ಯ ಸಿಗ್ತಿದೆ. ಕಂಪನಿ ಥರ್ಡ್ ಡೆವಲಪರ್ಗಳ ಸ್ಟಿಕ್ಕರ್ಗಳನ್ನು ಸೇರಿಸುತ್ತಿದೆ. ಇದ್ರ ವಿಶೇಷವೆಂದ್ರೆ ಬಯಸಿದ್ರೆ ನಿಮ್ಮ ಫೋಟೋಗಳನ್ನು ಕೂಡ ಕಸ್ಟಂ ಸ್ಟಿಕ್ಕರ್ ಮಾಡಿ ನೀವು ಸ್ನೇಹಿತರಿಗೆ ರವಾನೆ ಮಾಡಬಹುದು.

ಕಸ್ಟಮ್ ಸ್ಟಿಕ್ಕರ್ ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರು ಬಳಸಬಹುದಾಗಿದೆ. ನೀವು ಸ್ಟಿಕ್ಕರ್ ಮಾಡಲು ಬಯಸುವ ಫೋಟೋದ ಬ್ಯಾಕ್ ಗ್ರೌಂಡ್ ಮೊದಲು ತೆಗೆಯಬೇಕು. ಫೋಟೋಶಾಪ್ ಅಥವಾ ಆಪ್ ಮೂಲಕ ನೀವು ಫೋಟೋದ ಹಿಂದಿನ ಭಾಗವನ್ನು ಕತ್ತರಿಸಬೇಕು.

ಗೂಗಲ್ ನ ಪ್ಲೇ ಸ್ಟೋರ್ ನಲ್ಲಿ ಬ್ಯಾಕ್ ಗ್ರೌಂಡ್ ಎರೇಸರ್ ಆಪ್ ಕೂಡ ಇದೆ. ಇದ್ರ ಮೂಲಕ ನೀವು ಫೋಟೋ ಹಿನ್ನೆಲೆಯನ್ನು ಕತ್ತರಿಸಬಹುದು. ಇದನ್ನು ಪಿಎನ್ಜಿಯಲ್ಲಿ ಸೇವ್ ಮಾಡಿ. ಸ್ಟಿಕ್ಕರ್ ಪ್ಯಾಕ್ ನಲ್ಲಿ ಮೂರಕ್ಕಿಂತ ಕಡಿಮೆ ಫೋಟೋಗಳಿದ್ದರೆ ವಾಟ್ಸಾಪ್ ಅದನ್ನು ಸ್ವೀಕರಿಸುವುದಿಲ್ಲ. ಜೊತೆಗೆ ಪಿಎನ್ಜಿ ಫೋಟೋಗಳನ್ನು ಮಾತ್ರ ವಾಟ್ಸಾಪ್ ಆಯ್ಕೆ ಮಾಡಿಕೊಳ್ಳುತ್ತದೆ.

ನಂತ್ರ ಗೂಗಲ್ ಪ್ಲೇನಲ್ಲಿ ಪರ್ಸನಲ್ ಸ್ಟಿಕ್ಕರ್ ಫಾರ್ ವಾಟ್ಸಾಪ್ ಹೆಸರಿನ ಆಪ್ ಡೌನ್ಲೋಡ್ ಮಾಡಿ. ಇದು ಓಪನ್ ಆಗ್ತಿದ್ದಂತೆ ನೀವು ಸ್ಟಿಕರ್ ಗಾಗಿ ಕತ್ತರಿಸಿದ ಫೋಟೋವನ್ನು ಆಯ್ಕೆ ಮಾಡಿಕೊಳ್ಳಲಿದೆ. ಇದಕ್ಕೆ ಹೆಚ್ಚುವರಿ ಫೋಟೋ ಆ್ಯಡ್ ಮಾಡಬಹುದು. ನಂತ್ರ ವಾಟ್ಸಾಪ್ ಆಪ್ ಗೆ ಹೋಗಿ ಇಮೇಜ್ ಐಕಾನ್ ಕ್ಲಿಕ್ ಮಾಡಿ ಸ್ಟಿಕ್ಕರ್ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಫೋಟೋವನ್ನು ಸ್ಟಿಕ್ಕರ್ ರೀತಿಯಲ್ಲಿ ಕಳಿಸಿ ಸ್ನೇಹಿತರನ್ನು ಖುಷಿಪಡಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...