alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಆಗಿರೋದನ್ನ ಖಚಿತಪಡಿಸಿಕೊಳ್ಳುವುದೇಗೆ?

ತೆರಿಗೆದಾರರು ಆಧಾರ್ ಗೆ ಪಾನ್ ಕಾರ್ಡ್ ಲಿಂಕ್ ಮಾಡೋದಿಕ್ಕೆ ಭಾರತ ಸರ್ಕಾರ ಕಳೆದ ವರ್ಷ ಡಿಸೆಂಬರ್ ವರೆಗೆ ಅವಧಿ ನೀಡಿದ್ದು ಕೊನೆಗೆ ಅದನ್ನು 2018, ಮಾರ್ಚ್ 31 ವರೆಗೆ ವಿಸ್ತರಣೆ ಮಾಡಿದೆ.

ಬಹುತೇಕರು ಈಗಾಗಲೇ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರುತ್ತಾರೆ. ಆದರೆ ಈ ಲಿಂಕ್ ಸರಿಯಾಗಿ ಆಗಿದೆಯಾ ಅನ್ನೋ ಸಂದೇಹ ಹಲವರದ್ದು. ಇದಕ್ಕೆ ಇಲ್ಲಿದೆ ಉತ್ತರ.

ಆಧಾರ್ ಕಾರ್ಡ್ ಗೆ ಪಾನ್ ಕಾರ್ಡ್ ಲಿಂಕ್ ಆಗಿದೆಯಾ ಅಂತ ನೋಡೋದಿಕ್ಕೆ ಎರಡು ವಿಧಾನಗಳಿವೆ.

ಆದಾಯ ತೆರಿಗೆ ಇಲಾಖೆಯ ಇ ಫೈಲಿಂಗ್ ವೆಬ್ ಸೈಟ್ incometaxindiaefiling.gov.in ಹೋದರೆ ಅಲ್ಲಿ ‘ಲಿಂಕ್ ಆಧಾರ್’ ಅನ್ನೋದ್ರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಪಾನ್ ನಂಬರ್ ಹಾಗೂ ಆಧಾರ್ ನಂಬರ್ ಸಹಿತ ಅಗತ್ಯವಿರುವ ಮಾಹಿತಿಗಳನ್ನು ತುಂಬಬೇಕು.

ಇನ್ನೊಂದು, ಆದಾಯ ತೆರಿಗೆ ಇಲಾಖೆಯಿಂದ ಎಸ್.ಎಂ.ಎಸ್. ಸೌಲಭ್ಯ. ವ್ಯಕ್ತಿ ಆದಾಯ ತೆರಿಗೆ ಇಲಾಖೆಗೆ 567678 ಅಥವಾ 56161 ನಂಬರ್ ಗೆ UIDPAN<12 Digit Adhar><10Digit Pan> ಕಳುಹಿಸಿದರೆ ಆಧಾರ್ ಕಾರ್ಡ್ ಗೆ ಪಾನ್ ನಂಬರ್ ಜೊತೆ ಲಿಂಕ್ ಆಗಿದ್ದರೆ ನಿಮಗೆ ಎಸ್.ಎಂ.ಎಸ್. ಬರುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...