alex Certify
ಕನ್ನಡ ದುನಿಯಾ       Mobile App
       

Kannada Duniya

ಗಡುವು ಮುಗಿದ ಬಳಿಕ ತೆರಿಗೆ ಪಾವತಿಸಲು ಟಿಪ್ಸ್….

US Tax Form 1040

ಕೇಂದ್ರ ಸರ್ಕಾರ ವಿಧಿಸಿದ್ದ ಗಡುವಿನೊಳಗೆ ಆದಾಯ ತೆರಿಗೆ ಪಾವತಿಸಲು ಸಾಧ್ಯವಾಗದೇ ಇದ್ರೆ ತೆರಿಗೆದಾರರಿಗೆ ಆತಂಕ ಕಾಡೋದು ಸಹಜ. ಆದ್ರೆ ಅವಧಿ ಮುಗಿದ ಬಳಿಕವೂ ನೀವು ತೆರಿಗೆಯನ್ನು ಪಾವತಿ ಮಾಡಬಹುದು. ಅದ್ಹೇಗೆ ಅಂತಾ ನಾವ್ ಹೇಳ್ತೀವಿ.

ಡೆಡ್ ಲೈನ್ ಗೂ ಮುನ್ನ ನೀವು ಯಾವ ರೀತಿ ಆದಾಯ ತೆರಿಗೆ ಪಾವತಿಸುತ್ತೀರೋ, ಬಿಲೇಟೆಡ್ ಫೈಲಿಂಗ್ ಪ್ರಕ್ರಿಯೆ ಕೂಡ ಅದೇ ತೆರನಾಗಿರುತ್ತದೆ. ಒಂದೇ ಒಂದು ವ್ಯತ್ಯಾಸ ಅಂದ್ರೆ ಸೆಕ್ಷನ್ 139 (1)ರ ಬದಲು ಸೆಕ್ಷನ್ 139 (4) ರ ಅಡಿಯಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ.

ಈ ವರ್ಷ ನಿಮಗೆ ಯಾವ ತೆರಿಗೆ ಫಾರ್ಮ್ ಅನ್ವಯವಾಗುತ್ತದೆ ಎಂಬುದನ್ನು ನೋಡಿಕೊಳ್ಳಬೇಕು. ಅದು ನಿಮ್ಮ ಆದಾಯದ ಮೂಲವನ್ನು ಆಧರಿಸಿರುತ್ತದೆ. ತಡವಾಗಿ ಆದಾಯ ತೆರಿಗೆ ಪಾವತಿಸಲು 2018ರ ಮಾರ್ಚ್ 31 ಕಡೆಯ ದಿನಾಂಕ.

ಅಡ್ವಾನ್ಸ್ ಟ್ಯಾಕ್ಸ್ ಮತ್ತು ಟಿಡಿಎಸ್ ಕಡಿತದ ಬಳಿಕವೂ ಯಾವುದೇ ತೆರಿಗೆ ಬಾಕಿ ಇದ್ದಲ್ಲಿ ನೀವು ತಿಂಗಳಿಗೆ ಶೇ.1 ರಷ್ಟು ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಡ್ಯೂ ಡೇಟ್ ಗೂ ಮುನ್ನವೇ ಬಾಕಿ ಮೊತ್ತ ಪಾವತಿಸಿದ್ರೆ ದಂಡ ತಪ್ಪಿಸಿಕೊಳ್ಳಬಹುದು.

ಸಂಪೂರ್ಣ ಆನ್ ಲೈನ್ ನಲ್ಲೇ ತೆರಿಗೆ ಪಾವತಿ ಮಾಡಬಹುದು, ಇಲ್ಲವೇ ಎಕ್ಸೆಲ್ ಅಥವಾ ಜಾವಾ ಯುಟಿಲಿಟಿಯನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ವಿವರಗಳನ್ನು ಭರ್ತಿ ಮಾಡಿ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ.

www.incometaxindiaefiling.gov.in ವೆಬ್ ಸೈಟ್ ಗೆ ವಿಸಿಟ್ ಮಾಡಿ.

ಲಾಗಿನ್ ಹಿಯರ್ ಅನ್ನೋ ಬಟನ್ ಕ್ಲಿಕ್ ಮಾಡಿ, ಅಗತ್ಯ ವಿವರಗಳನ್ನು ನಮೂದಿಸಿ. ಕೊನೆಗೆ ಸಬ್ ಮಿಟ್ ಕೊಟ್ಟರೆ ಯಶಸ್ವಿಯಾಗಿ ಲಾಗಿನ್ ಆಗುತ್ತೀರಾ.

ಇ-ಫೈಲ್ ಅನ್ನೋ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಪ್ರಿಪೇರ್ & ಸಬ್ ಮಿಟ್ ಐಟಿಆರ್ ಆನ್ ಲೈನ್ ಎಂಬ ಆಪ್ಷನ್ ಆಯ್ಕೆ ಮಾಡಿಕೊಳ್ಳಿ.

ಅವಧಿ ಮುಗಿದ ನಂತರ ತೆರಿಗೆ ಪಾವತಿ ಮಾಡುತ್ತಿರುವುದರಿಂದ ಸೂಕ್ತವಾದ ಫಾರ್ಮ್ ಮತ್ತು ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕರಾಗಿರಿ.

ಅಗತ್ಯ ಡಿಟೇಲ್ಸ್ ಭರ್ತಿ ಮಾಡಿದ ಬಳಿಕ ಐಟಿಆರ್ ಫಾರ್ಮ್ ಪೇಜ್ ನಲ್ಲಿ ರಿ-ಡೈರೆಕ್ಟ್ ಮಾಡಲಾಗುತ್ತದೆ. ಆಫ್ಟರ್ ಡ್ಯೂ ಡೇಟ್ 139 (4) ಸೆಕ್ಷನ್ ಅನ್ನೇ ಆಯ್ಕೆ ಮಾಡಿಕೊಳ್ಳಿ.

ನೀವು ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ. ಪ್ರಿವ್ಯೂ & ಸಬ್ ಮಿಟ್ ಕೊಡಿ. ನಿಮ್ಮ ಐಟಿಆರ್ ವೆರಿಫೈ ಮಾಡಲು ಮರೆಯಬೇಡಿ. ನೀವು ವೆರಿಫೈ ಮಾಡದೇ ಇದ್ದಲ್ಲಿ ಅದನ್ನು ವ್ಯಾಲಿಡ್ ಎಂದು ಪರಿಗಣಿಸಲಾಗುವುದಿಲ್ಲ. ವೆರಿಫೈ ಮಾಡಲು 6 ವಿಧಾನಗಳಿವೆ.

ಆದಾಯ ತೆರಿಗೆ ಇಲಾಖೆಗೆ ವೆರಿಫೈ ಮಾಡಿದ ನಿಮ್ಮ ಐಟಿಆರ್ ತಲುಪಿದ ಬಳಿಕ, ಅವರು ಪ್ರೊಸೆಸಿಂಗ್ ಆರಂಭಿಸುತ್ತಾರೆ. ಐಟಿಆರ್ ಪ್ರೊಸೆಸ್ ಆದ ಬಳಿಕ ಎಸ್ ಎಂ ಎಸ್ ಅಥವಾ ಇಮೇಲ್ ಮೂಲಕ ಖಚಿತಪಡಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...