alex Certify
ಕನ್ನಡ ದುನಿಯಾ       Mobile App
       

Kannada Duniya

ಹರಿದ ನೋಟು ಬದಲಿಸುವ ಚಿಂತೆಯಲ್ಲಿರುವವರಿಗೆ ನೆಮ್ಮದಿಯ ಸುದ್ದಿ ನೀಡಿದ ಆರ್.ಬಿ.ಐ.

ದೆಹಲಿ: ಕಳೆದ ವರ್ಷ ಆರ್.ಬಿ.ಐ. ಹೊರ ತಂದ 500 ಹಾಗೂ 2000 ನೋಟು ಹರಿದು ಅಥವಾ ಮಾಸಿ ಹೋಗಿದ್ದರೆ ಅವನ್ನು ಬದಲಾವಣೆ ಮಾಡಲು ಚಿಂತಿಸುತ್ತಿರುವವರಿಗೆ ಆರ್.ಬಿ.ಐ‌. ನ ನೂತನ ನೀತಿ ನಿರಾಳ‌ ತರಿಸಿದೆ.

ಇಲ್ಲಿಯವರೆಗೆ ಆರ್.ಬಿ.ಐ. ತಾನು ಬಿಡುಗಡೆಗೊಳಿಸಿದ್ದ ಹೊಸ ನೋಟುಗಳ ಬದಲಾವಣೆಗೆ ಅವಕಾಶ ನೀಡಿರಲಿಲ್ಲ. ಆದರೀಗ ಈ ನೋಟ್ ಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಿದೆ.

ಆರ್.ಬಿ.ಐ. ಕಚೇರಿ ಹಾಗೂ ನಿಗದಿತ‌ ಬ್ಯಾಂಕ್ ಕೇಂದ್ರದಲ್ಲಿ ಬದಲಾಯಿಸಿಕೊಳ್ಳಬಹುದು ಎಂದು ಆರ್.ಬಿ.ಐ. ಶುಕ್ರವಾರ ತಿಳಿಸಿದೆ‌.

ಗ್ರಾಹಕರು ಬದಲಾಯಿಸಿಕೊಳ್ಳಲು ಇಚ್ಛಿಸುವ ನೋಟಿನ ಸ್ಥಿತಿ ನೋಡಿ, ಮೌಲ್ಯ ನಿಗದಿಪಡಿಸಲಾಗುವುದು. ಇದರೊಂದಿಗೆ ಸಣ್ಣ ಪ್ರಮಾಣದಲ್ಲಿ ನೋಟು ಹರಿದು ಹೋಗಿದ್ದರೆ, ಪೂರ್ಣ ಹಣ ನೀಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ 50 ರೂ. ನೋಟು ಅಥವಾ ಅದಕ್ಕಿಂತ ದೊಡ್ಡ ಮೊತ್ತದ ನೋಟನ್ನು ಬದಲಿಸಿಕೊಳ್ಳಲು, ಹರಿದು ಹೋಗಿರುವ ನೋಟನ್ನು ಬ್ಯಾಂಕ್ ಗೆ ನೀಡಬೇಕೆಂದು ಆರ್.ಬಿ.ಐ. ಸ್ಪಷ್ಟಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...