alex Certify ಹೂಡಿಕೆಯಿಲ್ಲದೆ ಮನೆಯಲ್ಲಿ ಕುಳಿತು ಗಳಿಸಿ ಕೈ ತುಂಬಾ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಡಿಕೆಯಿಲ್ಲದೆ ಮನೆಯಲ್ಲಿ ಕುಳಿತು ಗಳಿಸಿ ಕೈ ತುಂಬಾ ಹಣ

ಬೆಲೆ ಏರಿಕೆ ದುನಿಯಾದಲ್ಲಿ ಮನೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ಸಂಸಾರ ನಿರ್ವಹಣೆ ಸುಲಭವಲ್ಲ. ಮನೆ ನಡೆಸಲು ಎಷ್ಟು ಹಣವಿದ್ರೂ ಸಾಲದ ಕಾಲವಿದು. ಇಂಥ ಸಂದರ್ಭದಲ್ಲಿ ಅನೇಕರು ಕೆಲಸದ ಹೊರತು ಬಿಡುವಿನ ಸಮಯದಲ್ಲಿ ಅಲ್ಪಸ್ವಲ್ಪ ಹಣ ಸಂಪಾದನೆ ಮಾಡಲು ಬಯಸುತ್ತಾರೆ. ಅಂಥವರು ಅಥವಾ ಗೃಹಿಣಿಯರು ಮನೆಯಲ್ಲೇ ಕುಳಿತು ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ 30-40 ಸಾವಿರ ಗಳಿಸಬಹುದಾದ  ಸಾಕಷ್ಟು ಉದ್ಯೋಗವಿದೆ.

ಇ-ಕಾಮರ್ಸ್ ಕಂಪನಿ ಜೊತೆ ಕೈ ಜೋಡಿಸಿ ಹಣ ಸಂಪಾದನೆ ಮಾಡಬಹುದು. ಅಮೆಜಾನ್, ಫ್ಲಿಪ್ಕಾರ್ಟ್, ಸ್ಯಾಪ್ಡೀಲ್ ನಂತ ಕಂಪನಿಯಲ್ಲಿ ನಿಮ್ಮ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಯಾವುದೇ ವಸ್ತುವನ್ನು ನೀವಿಲ್ಲ ಮಾರಾಟ ಮಾಡಲು ಅವಕಾಶವಿದೆ.

ಇತ್ತೀಚಿನ ದಿನಗಳಲ್ಲಿ ಜನ, ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಯೋಗ ಕಲಿಯಲು ಮುಂದಾಗ್ತಿದ್ದಾರೆ. ಯೋಗ ಶಿಕ್ಷಕರಾಗಿಯೂ ನೀವು ಬ್ಯುಸಿನೆಸ್ ಶುರು ಮಾಡಬಹುದು. ಮನೆಯಲ್ಲಿಯೇ ಯೋಗ ಕಲಿಸಬಹುದು. ಪ್ರತಿಯೊಬ್ಬರಿಗೆ 500 ರೂಪಾಯಿಯಂತೆ ಫೀ ಪಡೆದು ಹಣ ಸಂಪಾದನೆ ಮಾಡಬಹುದು.

ಆಹಾರ ಎಲ್ಲರಿಗೂ ಬೇಕು. ಮೊಬೈಲ್ ಟಿಫನ್ ಸೆಂಟರ್ ಮೂಲಕ ನೀವು ಹಣ ಗಳಿಕೆ ಮಾಡಬಹುದು. ಇದಕ್ಕೆ ಹೆಚ್ಚಿನ ಹೂಡಿಕೆ ಬೇಕಾಗುವುದಿಲ್ಲ. ಹೆಚ್ಚು ಶ್ರಮ ಬೇಕಾಗುತ್ತದೆ. ಇಂಟರ್ನೆಟ್ ಅಪ್ಲಿಕೇಷನ್ ಮೂಲಕ ವ್ಯವಹಾರವನ್ನು ಮತ್ತಷ್ಟು ಜನಪ್ರಿಯ ಮಾಡಬಹುದು.

ಟ್ರಾನ್ಸ್ ಲೇಟರ್ ಗೆ ಈಗ ಬೇಡಿಕೆಯಿದೆ. ಸ್ಥಳೀಯ ಭಾಷೆ ಹಾಗೂ ಇಂಗ್ಲೀಷ್ ಮೇಲೆ ಹಿಡಿತವಿದ್ದರೆ ಇದ್ರಿಂದಲೂ ಹಣ ಗಳಿಸಬಹುದು. ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು ಕನ್ನಡ ಕಲಿಯಲು ಮುಂದಾಗ್ತಾರೆ. ಅವರಿಗೆ ಕನ್ನಡ ಕಲಿಸಿ ಗಳಿಸುವ ಅವಕಾಶವಿದೆ. ಆನ್ಲೈನ್ ಮೂಲಕ, ವಿಡಿಯೋ ಕಾಲಿಂಗ್ ಮೂಲಕ ನೀವು ಕನ್ನಡ ಕಲಿಸಬಹುದು.

ಮನೆ ಪಾಠದಿಂದಲೂ ನೀವು ಹೆಚ್ಚು ಗಳಿಸಬಹುದಾಗಿದೆ. ಗಣಿತ, ವಿಜ್ಞಾನದ ವಿಷ್ಯದಲ್ಲಿ ಹಿಡಿತವಿದ್ದು ಪಾಠ ಹೇಳಿಕೊಡುವ ಸಾಮರ್ಥ್ಯವಿದ್ದರೆ ಟ್ಯೂಷನ್ ಒಳ್ಳೆಯ ಉದ್ಯೋಗ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...