alex Certify
ಕನ್ನಡ ದುನಿಯಾ       Mobile App
       

Kannada Duniya

ನೆಟ್ ಇಲ್ಲದೆ ಒಂದೇ ಕ್ಲಿಕ್ ನಲ್ಲಿ ಸಿಗಲಿದೆ ಸರ್ಕಾರದ 162 ಸೇವೆ…!

ಸರ್ಕಾರದ ಸಣ್ಣ ಸಣ್ಣ ಸೇವೆಗಳನ್ನು ಪಡೆಯಲು ಜನಸಾಮಾನ್ಯ ಸಾಕಷ್ಟು ತೊಂದರೆ ಅನುಭವಿಸಬೇಕಾಗಿತ್ತು. ಆದ್ರೆ ಇನ್ಮುಂದೆ ಸರ್ಕಾರಿ ಕೆಲಸ ಸುಲಭವಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಒಂದು ಅಪ್ಲಿಕೇಷನ್ ನಿಮ್ಮೆಲ್ಲ ಕೆಲಸ ಮಾಡಿ ಮುಗಿಸಲಿದೆ.

ಕೆಲ ದಿನಗಳ ಹಿಂದಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ UMANG ಆ್ಯಪ್ ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್ ಸರ್ಕಾರದ 162 ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಲಿದೆ. ಈ ಆ್ಯಪ್ ಮೂಲಕ ನೀವು ಕರೆಂಟ್ ಬಿಲ್, ನೀರಿನ ಬಿಲ್, ಸಿಲಿಂಡರ್ ಬಿಲ್ಲನ್ನು ಸುಲಭವಾಗಿ ಪಾವತಿಸಬಹುದಾಗಿದೆ.

ಇದಕ್ಕೆ ನಿಮ್ಮ ಬಳಿ ಇಂಟರ್ನೆಟ್ ಇರಬೇಕೆಂದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಫೀಚರ್ ಫೋನ್ ನಲ್ಲಿಯೂ ಈ ಆ್ಯಪ್ ಲಭ್ಯವಾಗಲಿದೆ. ಆ  ನಂತ್ರ ನೆಟ್ ಇಲ್ಲದೆಯೇ ನೀವು ಆರಾಮವಾಗಿ ಮನೆಯಲ್ಲಿಯೇ ಕುಳಿತು ಬಿಲ್ ಪಾವತಿ ಮಾಡಬಹುದಾಗಿದೆ.

ಸದ್ಯ ಈ ಆ್ಯಪನ್ನು ಮೊಬೈಲ್ ಅಪ್ಲಿಕೇಷನ್, ವೆಬ್, ಐವಿಆರ್ ಮತ್ತು ಎಸ್ಎಂಎಸ್ ಮೂಲಕ ಸಂಪರ್ಕಿಸಬಹುದಾಗಿದೆ. ಸ್ಮಾರ್ಟ್ಫೋನ್, ಫೀಚರ್ ಫೋನ್, ಡೆಸ್ಕ್ ಟಾಪ್ ನಲ್ಲಿ ಇದನ್ನು ನೀವು ಚಾಲನೆ ಮಾಡಬಹುದಾಗಿದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್, ಆ್ಯಪ್ ಸ್ಟೋರ್ ಮತ್ತು ವಿಂಡೋಸ್ ಸ್ಟೋರ್ ನಲ್ಲಿ ಲಭ್ಯವಿದೆ. ಆ್ಯಂಡ್ರಾಯ್ಡ್ ಬಳಕೆದಾರರಾಗಿದ್ದರೆ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಬಹುದು.

ಡೌನ್ಲೋಡ್ ನಂತ್ರ ನಿಯಮಗಳ ಬಗ್ಗೆ ಹೇಳಲಾಗಿದೆ. ಅದಕ್ಕೆ ನೀವು ಸಹಿ ಹಾಕಬೇಕಾಗುತ್ತದೆ. ನಂತ್ರ ಮೊಬೈಲ್ ನಂಬರ್ ಹಾಕಬೇಕು. ನಂಬರ್ ಹಾಕಿದ ನಂತ್ರ ಒಟಿಪಿ ಬರುತ್ತದೆ. ಅದನ್ನು ಹಾಕಬೇಕು. ನಂತ್ರ ಆಧಾರ್ ಬಗ್ಗೆ ಆ್ಯಪ್ ಮಾಹಿತಿ ಕೇಳುತ್ತದೆ. ಅದನ್ನು ತುಂಬಿ UMANG ಆ್ಯಪ್ ಸಕ್ರಿಯಗೊಳಿಸಿಕೊಳ್ಳಬೇಕು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...