alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿನಿತ್ಯ ಬದಲಾಗುವ ಪೆಟ್ರೋಲ್-ಡಿಸೇಲ್ ಬೆಲೆ ತಿಳಿದುಕೊಳ್ಳುವುದೇಗೆ?

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿನಿತ್ಯ ಬದಲಾವಣೆ ಆಗುತ್ತಿದೆ. ಜಾಗತಿಕ ತೈಲ ಮಾರುಕಟ್ಟೆಗೆ ಅನುಗುಣವಾಗಿ ಭಾರತದ ತೈಲ ಕಂಪನಿಗಳು ಕೂಡ ಪ್ರತಿದಿನ ದರ ಬದಲಾವಣೆ ಮಾಡುತ್ತಿವೆ.

ಬಂಕ್ ಗೆ ಹೋಗುವ ಮುನ್ನವೇ ನೀವು ತೈಲ ಬೆಲೆಯನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ ವಾಹನ ಸವಾರರು IOCL ನ ಮೊಬೈಲ್ ಆಪ್ [email protected]ಯನ್ನು ಬಳಸಿಕೊಳ್ಳಬಹುದು. ಅಥವಾ ಎಸ್ಎಂಎಸ್ ಕಳಿಸುವ ಅವಕಾಶವೂ ಇದೆ.

ಇಂಡಿಯನ್ ಆಯಿಲ್ ಗ್ರಾಹಕರು RSP <dealer code> to 92249-92249 ಗೆ, ಬಿಪಿಸಿಎಲ್ ಗ್ರಾಹಕರು RSP <dealer code> to 9223112222 ಹಾಗೂ ಹೆಚ್.ಪಿ.ಸಿ.ಎಲ್.ಗ್ರಾಹಕರು HPPRICE <dealer code> to 9222201122 ಮೆಸೇಜ್ ಕಳಿಸಿದ್ರೆ ಆ ದಿನದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿಯಬಹುದು.

ಪ್ರತಿ ಪೆಟ್ರೋಲ್ ಬಂಕ್ ಗಳಲ್ಲೂ ಡೀಲರ್ ಕೋಡ್ ಹಾಕಿರುತ್ತಾರೆ. ತೈಲಬೆಲೆ ಬಗ್ಗೆ ಗ್ರಾಹಕರಿಗೆ ತಪ್ಪು ಮಾಹಿತಿ ಹೋಗಬಾರದು ಅನ್ನೋ ಕಾರಣಕ್ಕೆ, ಎಲ್ಲಾ ಇಂಡಿಯನ್ ಆಯಿಲ್ ಡೀಲರ್ ಗಳಿಗೂ ಒಂದೇ ಸಮಯದಲ್ಲಿ ಬೆಲೆ ಏರಿಳಿತದ ಮಾಹಿತಿ ರವಾನಿಸಲಾಗುತ್ತದೆ. ಆಟೋಮೇಶನ್ ಇಲ್ಲದ ಬಂಕ್ ಗಳಿಗೆ ಎಸ್ಎಂಎಸ್, ಇ ಮೇಲ್ ಹಾಗೂ ಆಪ್ ಮೂಲಕ ಅಪ್ ಡೇಟೆಡ್ ತೈಲ ಬೆಲೆಯನ್ನು ತಿಳಿಸಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...