alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣ ರದ್ದಾದ್ರೆ ಹಣ ವಾಪಸ್ ಪಡೆಯೋದು ಹೇಗೆ…?

ಭಾರತೀಯ ರೈಲ್ವೆ ಇಲಾಖೆ, ಪ್ರಯಾಣಿಕರ ಸುಗಮ ಸಂಚಾರಕ್ಕೆ ನಾನಾ ಅನುಕೂಲಗಳನ್ನು ಕಲ್ಪಿಸ್ತಾನೆ ಬಂದಿದೆ. ರೈಲ್ವೆ ಪ್ರಯಾಣದ ಮುಂಗಡ ಟಿಕೆಟ್ ಬುಕ್ಕಿಂಗ್ ಗಾಗಿ ತತ್ಕಾಲ್ ವ್ಯವಸ್ಥೆಯಿಂದಾಗಿ ಅಂತಿಮ ಕ್ಷಣದಲ್ಲಿ ಪ್ರಯಾಣ ಬಯಸುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಗಳು ಆಗ್ತಿವೆ. ಅಷ್ಟೇ ಅಲ್ಲ ಒಂದು ವೇಳೆ ಬುಕ್ ಆಗಿರುವ ಟಿಕೆಟ್ ರದ್ದು ಮಾಡಿ ಹಣ ವಾಪಸ್ಸು ಪಡೆದುಕೊಳ್ಳೋದಕ್ಕೂ ಈಗ ಇನ್ನಷ್ಟು ಸುಲಭ, ಸರಳ ವಿಧಾನಗಳನ್ನು ಜಾರಿಗೆ ತಂದಿದೆ.

ತತ್ಕಾಲ್ ಕೋಟಾದಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ ಬುಕ್ ಮಾಡಿದ ಟಿಕೆಟ್ ಗಳನ್ನ ಪ್ರಯಾಣಿಕರು ಕ್ಯಾನ್ಸಲ್ ಮಾಡಿಕೊಂಡ ಪಕ್ಷದಲ್ಲಿ ನಿಗದಿತ ಹಣವನ್ನು ಉಳಿಸಿಕೊಂಡು ಬಾಕಿ ಹಣವನ್ನು ಪ್ರಯಾಣಿಕರಿಗೆ ನೀಡುವ ವ್ಯವಸ್ಥೆ ಸದ್ಯ ಜಾರಿಯಲ್ಲಿದೆ. ಈಗ ಈ ವ್ಯವಸ್ಥೆಯನ್ನ ಇನ್ನಷ್ಟು ಸರಳಗೊಳಿಸೋಕೆ ರೈಲ್ವೆ ಇಲಾಖೆ ನಿರ್ಧರಿಸಿದೆ. ಆ ಪ್ರಕಾರ ಪ್ರಯಾಣಿಕರು ತುಂಬಾ ಸುಲಭವಾಗಿ ರದ್ದಾದ ರೈಲು ಪ್ರಯಾಣದ ಹಣ ವಾಪಸ್ಸಾಗಿದ್ಯಾ ಅನ್ನೋ ಮಾಹಿತಿ ತಿಳಿದುಕೊಳ್ಳಬಹುದು. ಆನ್ಲೈನ್ ಮೂಲಕ ಟಿಕೆಟ್ ಪಡೆದಿದ್ದವರಿಗೆ ಅವರು ಟಿಕೆಟ್ ಪಡೆಯಲು ಅನುಸರಿಸಿದ್ದ ಮಾರ್ಗಗಳಲ್ಲೇ ಹಣ ವಾಪಸ್ಸಾತಿಯಾಗಲಿದೆ.

ಈ ಸಂಬಂಧ ಟಿಕೆಟ್ ಹಣ ವಾಪಸ್ಸಾತಿಯನ್ನ ವೆಬ್ಸೈಟ್ ಮೂಲಕ ಪರಿಶೀಲಿಸುವ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಜಾರಿಗೆ ತಂದಿದೆ. ಆ ಪ್ರಕಾರ ಕೆಲವು ಸಿಂಪಲ್ ಸೂತ್ರಗಳನ್ನ ಪ್ರಯಾಣಿಕರು ಅನುಸರಿಸಬೇಕು.

ಮೊದಲಿಗೆ ಭಾರತೀಯ ರೈಲ್ವೆ ಇಲಾಖೆ ರೀಫಂಡ್ ಗಾಗಿಯೇ ಇರುವ refunds.Indianrail.gov.in ಗೆ ಲಾಗ್ ಇನ್ ಆಗಬೇಕು

ಬಳಿಕ ಪ್ರಯಾಣಿಕರು Check Refund Status ನ್ನ ಆರಿಸಿಕೊಂಡು ಅಲ್ಲಿ ಕೇಳಲಾಗುವ ಮಾಹಿತಿಯನ್ನು ದಾಖಲಿಸಬೇಕು.

ಆನಂತರ ವೆಬ್ಸೈಟ್ನಲ್ಲಿ ನಿಮಗೆ ಹಣ ವಾಪಸ್ಸು ತಲುಪಿದೆಯಾ ಇಲ್ಲವಾ ಅನ್ನೋ ಸ್ಟೇಟಸ್ ಕಾಣಸಿಗುತ್ತದೆ. ಅಲ್ಲದೇ ಪ್ರಯಾಣಿಸಬೇಕಿದ್ದ ರೈಲಿನ ಮಾಹಿತಿ ಸೇರಿದಂತೆ ನೀವು ಟಿಕೆಟ್ ಪಡೆದ ಮಾಹಿತಿಯೂ ಲಭ್ಯವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...