alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ‘ಆಧಾರ್’ ಮಾಹಿತಿ ಸುರಕ್ಷಿತವಾಗಿದೆಯೇ…? ಹೀಗೆ ಚೆಕ್ ಮಾಡಿಕೊಳ್ಳಿ

ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ಸುರಕ್ಷಿತವೋ ಅಲ್ಲವೋ ಅನ್ನೋ ಗೊಂದಲ ಇನ್ನೂ ಮುಂದುವರೆದಿದೆ. ಆದ್ರೆ ಆಧಾರ್ ಸುರಕ್ಷಿತ ಅನ್ನೋದನ್ನ ನಿರೂಪಿಸುವ ಸಲುವಾಗಿ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಆರ್.ಎಸ್. ಶರ್ಮಾ, ತಮ್ಮ ಆಧಾರ್ ನಂಬರ್ ನ್ನ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿ ಹ್ಯಾಕರ್ಸ್ ಗಳಿಗೆ ಸವಾಲೆಸೆದಿದ್ದರು.

ಇದಕ್ಕೆ ಪ್ರತಿಯಾಗಿ ಫ್ರೆಂಚ್ ಭದ್ರತಾ ಸಿಬ್ಬಂದಿಯೋರ್ವ ಶರ್ಮಾ ಅವರ ಆಧಾರ್ ನಂಬರ್ ಮೂಲಕ ಅವರ ಫೋನ್ ನಂಬರ್, ಬದಲಿ ಮೊಬೈಲ್ ನಂಬರ್, ಅವರು ಬಳಸುತ್ತಿರುವ ಐಫೋನ್, ಅದರಲ್ಲಿರುವ ಪ್ರೊಫೈಲ್ ಫೊಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಸಿದ್ದ. ಇದನ್ನ ನಾನು ಇಲ್ಲಿಗೆ ನಿಲ್ಲಿಸುತ್ತೇನೆ. ಆಧಾರ್ ಕಾರ್ಡ್ ನ ಮಾಹಿತಿಯನ್ನು ಯಾಕೆ ಬಹಿರಂಗಪಡಿಸಬಾರದು ಅಂತ ನಿಮಗೆ ಅರ್ಥವಾಗಿದೆ ಎಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದ. ಹಾಗಿದ್ದರೂ ಆರ್.ಎಸ್. ಶರ್ಮಾ ಇದರಿಂದ ತಮಗೇನು ಹಾನಿಯಾಗಿಲ್ಲ ಎಂದು ಟ್ವೀಟ್ ಮಾಡಿದ್ದರು.

ಈ ಘಟನೆ ನಂತರದಲ್ಲಿ ಸಾರ್ವಜನಿಕರಿಗೆ ಆಧಾರ್ ಕಾರ್ಡ್ ದುರುಪಯೋಗವಾಗದೆ ಇದೆಯಾ ಅನ್ನೋ ಅನುಮಾನಗಳು ಬರೋದು ಸಹಜ. ಹಾಗಾದ್ರೆ ನಿಮ್ಮ ಆಧಾರ್ ಕಾರ್ಡ್ ನ ಯಾರಾದ್ರು ದುರುಪಯೋಗ ಮಾಡಿಕೊಂಡಿದ್ದಾರಾ ಅನ್ನೋದನ್ನ ಚೆಕ್ ಮಾಡೋದಕ್ಕೆ ಕೆಲವು ಸರಳ ವಿಧಾನಗಳಿವೆ.

ಮೊದಲು ನೀವು ಆಧಾರ್ ಕಾರ್ಡ್ ನ uidai.gov.in ಗೆ ಲಾಗ್ ಇನ್ ಆಗಬೇಕು.

ಅಲ್ಲಿ ಆಧಾರ್ ಸರ್ವೀಸ್ ಟ್ಯಾಬ್ ಅಥವಾ ಆಧಾರ್ ಅಥೆಂಟಿಕೇಷನ್ ಹಿಸ್ಟರಿ ಕ್ಲಿಕ್ ಮಾಡಿ.

ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ನ ನಂಬರ್ ನಮೂದಿಸಬೇಕು.

ಸೆಕ್ಯುರಿಟಿ ಕೋಡ್ ಎಂಟ್ರಿ ಮಾಡಿದ ಬಳಿಕ ಜನರೇಟ್ ಓಟಿಪಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಆನಂತರದಲ್ಲಿ ಕಾಣುವ ಹಲವು ಆಯ್ಕೆಗಳಲ್ಲಿ ಸೆಲೆಕ್ಟ್ ಆಲ್ ಎಂಬ ಆಯ್ಕೆಯನ್ನ ಕ್ಲಿಕ್ ಮಾಡಿ.

ಕೂಡಲೇ ನೀವು ಈ ಹಿಂದೆ ಆಧಾರ್ ಕಾರ್ಡ್ ಬಳಕೆ ಮಾಡಿದ ಇತಿಹಾಸದ ವಿವರ ಸಿಗುತ್ತದೆ.

ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ಗೆ ಬರುವಂತಾ ಓಟಿಪಿಯನ್ನ ಎಂಟ್ರಿ ಮಾಡಿದ್ರೆ ಆಧಾರ್ ಬಳಕೆಯ ಸಂಪೂರ್ಣ ಮಾಹಿತಿ ನಿಮಗೆ ಸಿಗುತ್ತದೆ.

ಆಧಾರ್ ಕಾರ್ಡ್ ದುರುಪಯೋಗವನ್ನ ತಪ್ಪಿಸಲು ಬಯೋಮೆಟ್ರಿಕ್ ಲಾಕಿಂಗ್ ವ್ಯವಸ್ಥೆ ಕೂಡ ಲಭ್ಯವಿದೆ. ಅದಕ್ಕಾಗಿಯೂ ನೀವು ಕೆಲ ಸರಳ ಸೂತ್ರಗಳನ್ನ ಪಾಲಿಸಬೇಕು.

ಮನೆಯ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.

ನಿಮ್ಮ ಆಧಾರ್ ಸಂಖ್ಯೆಯನ್ನ ಎಂಟ್ರಿ ಮಾಡಿ.

ಸೆಕ್ಯುರಿಟಿ ಕೋಡ್ ಎಂಟ್ರಿ ಮಾಡಿ.

ಓಟಿಪಿ ನಿಮ್ಮ ಮೊಬೈಲ್ ಗೆ ಬರುತ್ತದೆ.

ಆಧಾರ್ ಕಾರ್ಡ್ ಲಾಕ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...