alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಫೋನ್-2 ಖರೀದಿ ಹೇಗೆ ಗೊತ್ತಾ…?

ಆಗಸ್ಟ್ 15, ಸ್ವಾತಂತ್ರ್ಯ ದಿನದಂದು ಜಿಯೋಫೋನ್-2 ಬಿಡುಗಡೆಯಾಗ್ತಿದೆ. ಇದು ರಿಲಾಯನ್ಸ್ ಜಿಯೋ ಫೀಚರ್ ಫೋನ್ ನ ನವೀಕರಿಸಿದ ಆವೃತ್ತಿಯಾಗಿದೆ. ರಿಲಾಯನ್ಸ್ ಇಂಡಸ್ಟ್ರಿಯ 41ನೇ ವಾರ್ಷಿಕ ಸಭೆಯಲ್ಲಿ ಆಕಾಶ್ ಅಂಬಾನಿ ಹಾಗೂ ಇಶಾ ಅಂಬಾನಿ ಜಿಯೋ-2 ಮೊಬೈಲ್ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಆಗಸ್ಟ್ 15ರಿಂದ ಇದ್ರ ಮಾರಾಟ ಶುರುವಾಗಲಿದೆ.

ಬಳಕೆದಾರರಿಗೆ ಈ ಫೋನ್ ನಲ್ಲಿ ವಾಟ್ಸಾಪ್, ಫೇಸ್ಬುಕ್, ಯುಟ್ಯೂಬ್ ಹಾಗೂ ಗೂಗಲ್ ನಕ್ಷೆಗಳು ಲಭ್ಯವಾಗಲಿವೆ. ಜಿಯೋ ಫೋನ್-2 ಗ್ರಾಹಕರಿಗೆ ಮೈ ಜಿಯೋ ಆ್ಯಪ್ ಹಾಗೂ ಜಿಯೋ ಡಾಟ್ ಕಾಂ ವೆಬ್ಸೈಟ್ ನಲ್ಲಿ ಸಿಗಲಿದೆ. ನೋಂದಣಿಗೆ ವೆಬ್ಸೈಟ್ ತೆರೆದುಕೊಳ್ತಿದ್ದಂತೆ ನೀವು ಫೋನ್ ಖರೀದಿ ಮಾಡಬಹುದಾಗಿದೆ.

ವೆಬ್ಸೈಟ್ ನಲ್ಲಿ ಹೊಸ ಸಾಧನದ ನೋಂದಣಿ ಬ್ಯಾನರ್ ಕಾಣಲಿದೆ. Get Now ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇಲ್ಲಿ ನಿಮ್ಮ ಫೋನ್ ನಂಬರ್ ನೀಡಬೇಕು. ಇದಾದ ನಂತ್ರ 2999 ರೂಪಾಯಿ ಪೇಮೆಂಟ್ ಮಾಡ್ಬೇಕು. ಇದನ್ನು ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಬೇಕು. ಆಗಸ್ಟ್ 15ರಂದೇ ಹಳೆ ಜಿಯೋ ಫೋನ್ ಕೂಡ ಅಪ್ಡೇಟ್ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...