alex Certify
ಕನ್ನಡ ದುನಿಯಾ       Mobile App
       

Kannada Duniya

ಆ.16 ರಿಂದ ಶುರುವಾಗಲಿದೆ ಜಿಯೋ ಫೋನ್-2 ಫ್ಲಾಶ್ ಸೇಲ್

ಜಿಯೋ ಫೋನ್-2 ದ ಫ್ಲಾಶ್ ಸೇಲ್ ಆಗಸ್ಟ್ 16ರಂದು ಮಧ್ಯಾಹ್ನ 12 ಗಂಟೆಯಿಂದ ಶುರುವಾಗಲಿದೆ. ಜಿಯೋ ಫೀಚರ್ ಫೋನ್ ಅಪ್ ಗ್ರೇಡ್ ಜಿಯೋ ಫೋನ್-2. ಜಿಯೋ ಫೋನ್-2 ಫ್ಲಾಶ್ ಸೇಲ್ jio.com ನಲ್ಲಿ ನಡೆಯಲಿದೆ. ಈ ಫೋನ್ ನಲ್ಲಿ ಸಂಪೂರ್ಣ ಕಿ-ಬೋರ್ಡ್ ನೀಡಲಾಗಿದೆ. ಇದು ಬಳಕೆದಾರರ ಟೈಪಿಂಗ್ ಗೆ ಸಹಾಯವಾಗಲಿದೆ.

ಹಳೆ ಫೀಚರ್ ಫೋನ್ ನಲ್ಲಿ ಟೈಪಿಂಗ್ ಸಮಸ್ಯೆ ಎದುರಾಗ್ತಾಯಿತ್ತು. ಹೊಸ ಫೋನ್ ನಲ್ಲಿ ಈ ಸಮಸ್ಯೆ ಇರುವುದಿಲ್ಲ. ಇದ್ರಲ್ಲಿ ಫೇಸ್ಬುಕ್, ವಾಟ್ಸಾಪ್, ಯುಟ್ಯೂಬ್ ಮತ್ತು ಗೂಗಲ್ ನಕ್ಷೆಗಳು ಲಭ್ಯವಾಗಲಿವೆ. ಜಿಯೋ ಫೋನ್ 2 ನಲ್ಲಿ 2.4 ಇಂಚಿನ ಸ್ಕ್ರೀನ್ ನೀಡಲಾಗಿದೆ. QWERTY ಕೀ ಪ್ಯಾಡ್ ಇದೆ. ಇದ್ರಲ್ಲಿ 512 ಎಂಬಿ ರ್ಯಾಮ್, 4ಜಿಬಿ ಇಂಟರ್ನಲ್ ಮೆಮೊರಿ ನೀಡಲಾಗಿದೆ.

ಜಿಯೋ ಫೋನ್ 2ನಲ್ಲಿ 2 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ವಿಡಿಯೋ ಕಾಲಿಂಗ್ ಗಾಗಿ 0.3 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಲಾಗಿದೆ. ಈ ಫೋನ್ KAI OS ನಲ್ಲಿ ಕೆಲಸ ಮಾಡಲಿದೆ. ಜಿಯೋ ಫನ್ -2ನಲ್ಲಿ 2000 mAh ಬ್ಯಾಟರಿ ನೀಡಲಾಗಿದೆ. ಆಗಸ್ಟ್ 15 ಅಂದ್ರೆ ಇಂದಿನಿಂದ ಜಿಯೋ ಫೀಚರ್ ಫೋನ್ ಅಪ್ಡೇಟ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...