alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಖರೀದಿಸಲು ಬಯಸುವರಿಗೆ ಕಹಿ ಸುದ್ದಿ

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಭಾರತದ ಪ್ರಮುಖ ನಗರಗಳಲ್ಲಿ ವಾಸಿಸುತ್ತಿರುವ ಜನರಿಗೊಂದು ಕಹಿ ಸುದ್ದಿ. ಆರ್.ಬಿ.ಐ. ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ಮುಂದಿನ ಏಪ್ರಿಲ್ ವೇಳೆಗೆ ಮನೆ‌ಗಳ‌ ಬೆಲೆ ಶೇ.5.3 ರಷ್ಟು ದರ ಏರಿಕೆಯಾಗಲಿದೆಯಂತೆ.

ಭಾರತದ ಪ್ರಮುಖ 10 ನಗರಗಳಲ್ಲಿ ಮುಂದಿನ ಏಪ್ರಿಲ್- ಮೇ ತ್ರೈಮಾಸಿಕ ಅವಧಿ ವೇಳೆಗೆ ಮನೆಗಳ ದರ ಶೇ.5.3 ರಷ್ಟು ಏರಿಕೆಯಾಗಲಿದೆ ಎನ್ನುವ ಮಾಹಿತಿ ಆರ್.ಬಿ.ಐ. ಬಹಿರಂಗಗೊಳಿಸಿದೆ. 2018-19 ರ ಮೊದಲ ತ್ರೈಮಾಸಿಕದಲ್ಲಿ ಈ ಏರಿಕೆಯಾಗಲಿದೆ ಎಂದಿರುವ ಆರ್.ಬಿ.ಐ. ಕಳೆದ ವರ್ಷದ ತ್ರೈಮಾಸಿಕದಲ್ಲಿ 6.7 ಹಾಗೂ 8.7 ರಷ್ಟು ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

ಆರ್.ಬಿ.ಐ. ನೀಡಿರುವ ವರದಿಯಲ್ಲಿ ಪ್ರಮುಖವಾಗಿ ಬೆಂಗಳೂರು, ಮುಂಬಯಿ, ದೆಹಲಿ, ಚೆನ್ನೈ, ಕೊಲ್ಕತ್ತಾ, ಲಕ್ನೋ, ಅಹಮದಾಬಾದ್, ಜೈಪುರ, ಕಾನ್ಪುರ ಹಾಗೂ ಕೊಚ್ಚಿ ನಗರಗಳ ಮನೆ ಹಾಗೂ ಜೀವನ ಶೈಲಿ ಬಗ್ಗೆಯ ವರದಿಯಲ್ಲಿ ಈ ಮಾಹಿತಿ ತಿಳಿದುಬಂದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ದೆಹಲಿಯನ್ನು ಹೊರತುಪಡಿಸಿ ಇನ್ನುಳಿದ ನಗರಗಳಲ್ಲಿ ಜೀವನ ಶೈಲಿ ಹಾಗೂ ಮನೆಯ ದರ ಏರಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...