alex Certify
ಕನ್ನಡ ದುನಿಯಾ       Mobile App
       

Kannada Duniya

16 ಎಂಪಿ ಮೆಗಾಪಿಕ್ಸಲ್ ಕ್ಯಾಮರಾ ಜೊತೆ ಬಿಡುಗಡೆಯಾಯ್ತು ಆನರ್ 9ಎನ್

ಹುವಾವೇ ಸಬ್ ಬ್ರ್ಯಾಂಡ್ ಆನರ್ ನ ಹೊಸ ಸ್ಮಾರ್ಟ್ಫೋನ್ ಆನರ್ 9 ಎನ್ ಭಾರತದಲ್ಲಿ ಬಿಡುಗಡೆಯಾಗಿದೆ. ಆನರ್ 9 ಎನ್ 5.84 ಇಂಚು ಸ್ಕ್ರೀನ್ ಜೊತೆ ಬಂದಿದೆ. ಆನರ್ ಜುಲೈ 31 ರಿಂದ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಾಗಲಿದೆ.

ಆನರ್ 9 ಎನ್ ಮೊಬೈಲ್ ಆರಂಭದ ಬೆಲೆ 11,999 ರೂಪಾಯಿ. ಕಪ್ಪು, ನೀಲಿ ಮತ್ತು ಹಸಿರು ಬಣ್ಣದಲ್ಲಿ ಫೋನ್ ಸಿಗಲಿದೆ. ಆನರ್ 9 ಎನ್ ಮೂರು ರೂಪಾಂತರದಲ್ಲಿ ಬಿಡುಗಡೆಯಾಗಿದೆ. 3 ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಸ್ಮಾರ್ಟ್ಫೋನ್ ಬೆಲೆ 11,999 ರೂಪಾಯಿ. 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 13,999 ರೂಪಾಯಿ.

4 ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 17,999 ರೂಪಾಯಿ. ಜುಲೈ 31,ಮಧ್ಯಾಹ್ನ 12 ಗಂಟೆ ಮೇಲೆ ಈ ಮೊಬೈಲ್ ಫ್ಲಿಪ್ಕಾರ್ಟ್ ನಲ್ಲಿ ಗ್ರಾಹಕರಿಗೆ ಸಿಗಲಿದೆ.ಆನರ್ 9ಎನ್ ಮೇಲೆ ಜಿಯೋ ಗ್ರಾಹಕರು 2200 ರೂಪಾಯಿ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ.ಇದ್ರ ಜೊತೆ ಫ್ಯಾಷನ್ ವೆಬ್ಸೈಟ್ ಮಿಂಟ್ರಾದ 1200 ರೂಪಾಯಿ ಕೂಪನ್ ಸಿಗಲಿದೆ.ಮೊಬೈಲ್ ಗೆ 3000mAh ಬ್ಯಾಟರಿ ನೀಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದ್ರೆ ದಿನಪೂರ್ತಿ ಬಳಸಬಹುದು ಎನ್ನುತ್ತಿದೆ ಕಂಪನಿ.

ಡ್ಯುಯಲ್ ರಿಯಲ್ ಕ್ಯಾಮರಾ ಸೆಟ್ ಅಪ್ ನೀಡಲಾಗಿದೆ. 13 ಮೆಗಾಪಿಕ್ಸಲ್ ಸೆನ್ಸರ್ ಕ್ಯಾಮರಾ ಹಾಗೂ 2 ಮೆಗಾಪಿಕ್ಸಲ್ ನ ಸೆಕೆಂಡ್ ಸೆನ್ಸರ್ ಕ್ಯಾಮರಾ ನೀಡಲಾಗಿದೆ. ಫೋನ್ ನಲ್ಲಿ 16 ಎಂಪಿ ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಲಾಗಿದ್ದು,ಇದು ಮೊಬೈಲ್ನ ವಿಶೇಷತೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...