alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಿಧ ಕಂಪನಿ ಸ್ಕೂಟರ್ ಗಳ ಮೇಲೆ ಸಿಗ್ತಿದೆ ಭರ್ಜರಿ ಆಫರ್

ಯಮಹಾ, ಸುಜುಕಿ, ಹೋಂಡಾ ಸ್ಕೂಟರ್ ಹಾಗೂ ಬೈಕ್ ಪ್ರಿಯರಿಗೆ ಖುಷಿ ಸುದ್ದಿ. ವಿತರಕರು ಹಾಗೂ ಉತ್ಪಾದನಾ ಕಂಪನಿಗಳು ಸ್ಕೂಟರ್ ಹಾಗೂ ದ್ವಿಚಕ್ರ ವಾಹನಗಳ ಮೇಲೆ ಭರ್ಜರಿ ಆಫರ್ ನೀಡ್ತಿವೆ.

ದೆಹಲಿಯಲ್ಲಿರುವ ಯಮಹಾ ವಿತರಕರು ದ್ವಿಚಕ್ರವಾಹನ ಖರೀದಿದಾರರಿಗೆ 2 ಸಾವಿರ ರೂಪಾಯಿ ಡಿಸ್ಕೌಂಟ್ ನೀಡ್ತಿದ್ದಾರೆ. ಚೆನ್ನೈ ವಿತರಕರು 2500 ರೂಪಾಯಿಯವರೆಗೆ ಎಕ್ಸ್ ಕ್ಲ್ಯೂಸಿವ್ ಆಫರ್ ನೀಡ್ತಿದ್ದಾರೆ. ಇನ್ನು ಬೆಂಗಳೂರು ವಿತರಕರು ಶೇಕಡಾ 40 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ ಸುಜುಕಿ ಸ್ಕೂಟರ್ ಖರೀದಿದಾರರಿಗೆ 900 ರೂಪಾಯಿ ರಿಯಾಯಿತಿ ಸಿಗ್ತಿದೆ. ಚೆನ್ನೈ ವಿತರಕರು ಸ್ಕೂಟರಿನ ಬಿಡಿ ಭಾಗಗಳಿಗೆ ರಿಯಾಯಿತಿ ನೀಡ್ತಿದ್ದಾರೆ. ಶೇಕಡಾ 40 ರಷ್ಟು ಡಿಸ್ಕೌಂಟ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹೋಂಡಾ ಕಂಪನಿಯ ಆ್ಯಕ್ಟಿವಾ, ಹೋಂಡಾ ಏವಿಯೇಟರ್ ಖರೀದಿ ಮಾಡಿದ್ರೆ 2 ಸಾವಿರದವರೆಗೆ ರಿಯಾಯಿತಿ ನೀಡ್ತಿದ್ದಾರೆ. ಆದ್ರೆ ಬೆಂಗಳೂರು, ಮುಂಬೈ, ದೆಹಲಿಯ ಹೋಂಡಾ ಬೈಕ್ ವಿತರಕರು ಯಾವುದೇ ಘೋಷಣೆ ಮಾಡಿಲ್ಲ.

ಬೆಂಗಳೂರಿನಲ್ಲಿರುವ ಟಿವಿಎಸ್ ಸ್ಕೂಟರ್ ವಿತರಕರು, ಯಾವುದೇ ಸ್ಕೂಟರ್ ಖರೀದಿ ಮೇಲೆ 2 ಸಾವಿರ ರೂಪಾಯಿ ರಿಯಾಯಿತಿ ನೀಡ್ತಿದ್ದಾರೆ. ಎನ್ಕೋರ್ 125 ಗೆ ಈ ರಿಯಾಯಿತಿ ಸಿಗ್ತಿಲ್ಲ. ಗುರು ದಕ್ಷಿಣೆ ಹೆಸರಿನಲ್ಲಿ ಈ ಆಫರ್ ನೀಡಲಾಗ್ತಿದೆ. ಕುಟುಂಬದಲ್ಲಿ ಯಾರಾದ್ರೂ ಶಿಕ್ಷಕರಿದ್ದಲ್ಲಿ ಮಾತ್ರ ಈ ರಿಯಾಯಿತಿ ಸಿಗಲಿದೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...